ರಾಜ್ಯ

ಆಧಾರ್ ನೋಂದಣಿ ಸಿಬ್ಬಂದಿಗಳಿಂದ ಹಣ ಬೇಡಿಕೆ:ಸಾರ್ವಜನಿಕರ ಆರೋಪ

Sumana Upadhyaya
ಬೆಂಗಳೂರು: ಆಧಾರ್ ಸಂಖ್ಯೆಯನ್ನು ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಸಂಪರ್ಕಿಸಬೇಕೆಂಬ ನಿಯಮಗಳಾಗಿರುವಾಗ ನೋಂದಣಿ ಕೇಂದ್ರದಲ್ಲಿನ ಸಿಬ್ಬಂದಿ ಈ ಸಂದರ್ಭದಲ್ಲಿ ಹಣ ಮಾಡಿಕೊಳ್ಳುವ ದಾರಿ ಕಂಡುಕೊಂಡಿದ್ದಾರೆ. ಈ ಮೂಲಕ ವ್ಯವಸ್ಥೆಯ ದುರುಪಯೋಗಮಾಡಿಕೊಳ್ಳಲು ಹೊರಟಿದ್ದಾರೆ. ಹಲವು ನೋಂದಣಿ ಕೇಂದ್ರಗಳಲ್ಲಿ ಸಿಬ್ಬಂದಿ ಹಣ ಕೇಳುತ್ತಾರೆ ಎನ್ನುತ್ತಾರೆ ಸಾರ್ವಜನಿಕರು. ಈ ಬಗ್ಗೆ ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿಯನ್ನು ವಿಚಾರಿಸಿದರೆ, ನೋಂದಣಿ ಉಚಿತವಾದರೂ ಕೂಡ ಅಪ್ಡೇಟ್ ಮಾಡಿಕೊಳ್ಳಲು ನಿಗದಿತ ಹಣ ನೀಡಬೇಕು. ನೋಂದಣಿದಾರರು ಹೆಚ್ಚು ಹಣ ಕೇಳಿದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎನ್ನುತ್ತಾರೆ.
ಬೆಂಗಳೂರಿನ ಶೇಷಾದ್ರಿಪುರಂ ಆಧಾರ್ ನೋಂದಣಿ ಕೇಂದ್ರದಲ್ಲಿ ವಿಜಯರಾಮ್ ಪಿ ಎಂಬುವವರು ಇತ್ತೀಚೆಗೆ ಆಧಾರ್ ಕಾರ್ಡಿನಲ್ಲಿ ಹೆಸರು ಅಪ್ಡೇಟ್ ಮಾಡಿಸಿಕೊಳ್ಳಲು 100 ರೂಪಾಯಿ ನೀಡಿದ್ದರು. ಆಧಾರ್ ಕಾರ್ಡು ಮತ್ತು ಪಾನ್ ಕಾರ್ಡಿನಲ್ಲಿ ಹೆಸರು ಹೊಂದಾಣಿಕೆಯಾಗಬೇಕಾಗಿರುವುದರಿಂದ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ನಾನು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ 100 ರೂಪಾಯಿ ನೀಡಿ ಅಪ್ಡೇಟ್ ಮಾಡಿಸಿಕೊಂಡೆ ಎನ್ನುತ್ತಾರೆ.
ಯುಐಡಿಎಐ ಎಲ್ಲಾ ಅಂಕಿಅಂಶಗಳ ದಾಖಲೆಗಳನ್ನು ನಿರ್ವಹಿಸುತ್ತಿದ್ದರೂ ಕೂಡ ನೋಂದಣಿಯನ್ನು ಅನೇಕ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಹೆಚ್ಚು ಹಣ ಕೇಳುತ್ತವೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.
SCROLL FOR NEXT