ಬೆಳ್ಳಂದೂರು ಕೆರೆ ಸಮೀಪದ 13 ಕಾರ್ಖಾನೆ ಮುಚ್ಚುವಂತೆ ಕೆಎಸ್ ಪಿಸಿಬಿ ನೋಟಿಸ್
ಬೆಳ್ಳಂದೂರು ಕೆರೆ ಮಲಿನಗೊಳ್ಳಲು ಕಾರಣವಾದ ರೆಡ್ ಕೆಟೆಗರಿಯ(ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳು).....
ಬೆಂಗಳೂರು: ಬೆಳ್ಳಂದೂರು ಕೆರೆ ಮಲಿನಗೊಳ್ಳಲು ಕಾರಣವಾದ ರೆಡ್ ಕೆಟೆಗರಿಯ(ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳು) 13 ಕಾರ್ಖಾನೆಗಳನ್ನು ಈ ಕೂಡಲ್ ಬಂದ್ ಮಾಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ(ಕೆಎಸ್ ಪಿಸಿಬಿ) ನೋಟಿಸ್ ಜಾರಿ ಮಾಡಿದೆ.
ಬೆಳ್ಳಂದೂರು ಕೆರೆಗೆ ತ್ಯಾಜ್ಯ, ಕಲುಷಿತ ನೀರನ್ನು ಬಿಡುವ ಕೆರೆಯ ಸುತ್ತಮುತ್ತ ಇರುವ ಕೈಗಾರಿಕೆಯನ್ನು ಮುಚ್ಚಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶಿಸಿದ ಹಿನ್ನೆಲೆಯಲ್ಲಿ ಕೆಎಸ್ ಪಿಸಿಬಿ ಈ ನೋಟಿಸ್ ನೀಡಿದೆ.
ಬೆಳ್ಳಂದೂರು ಕೆರೆ ಸುತ್ತ ಒಟ್ಟು 488 ಕಾರ್ಖಾನೆಗಳಿದ್ದು, ರೆಡ್ ಕೆಟೆಗರಿಯಲ್ಲಿರುವ 46 ಕೈಗಾರಿಕೆಯ ಪೈಕಿ 13 ಕೈಗಾರಿಕೆಗಳಿಗೆ ಕೆಎಸ್ ಪಿಸಿಬಿ ನೋಟಿಸ್ ನೀಡಿದೆ.
ಕೆರೆಯ ಸುತ್ತಮುತ್ತಲಿನಿ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ನಾವು ನಾಲ್ಕು ತಂಡಗಳಿದ್ದು, ನೋಟಿಸ್ ನೀಡಿದ ನಂತರವೂ ಈ 13 ಕೈಗಾರಿಕೆಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡದೆ ಇದ್ದರೆ ನಾವೇ ಬೀಗ ಜಡಿಯುತ್ತೇವೆ ಎಂದು ಕೆಎಸ್ ಪಿಎಸ್ ಬಿ ಅಧ್ಯಕ್ಷ ಲಕ್ಷ್ಮಣ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.