ಬೆಂಗಳೂರು: ಈ ವರೆಗೂ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಿಂದಲೇ ಆಡಳಿತಕ್ಕೆ ಹೊರತಾದ ವಿಷಯಗಳನ್ನು ಟ್ವೀಟ್ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಈಗ ಟ್ವಿಟರ್ ನಲ್ಲಿ ತಮ್ಮ ಖಾಸಗಿ ಖಾತೆಗೆ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿಯ ಹೊರತಾಗಿ ಓರ್ವ ಹೆಮ್ಮೆಯ ಕನ್ನಡಿಗನಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು ಖಾಸಗಿ ಖಾತೆಯನ್ನು ಪ್ರಾರಂಭಿಸಿರುವುದಾಗಿ ಸಿಎಂ ಟ್ವೀಟ್ ಖಾತೆಯಲ್ಲಿ ತಿಳಿಸಿದ್ದಾರೆ. " ಇಂದು ಟ್ವಿಟರ್ ನಲ್ಲಿ ನನ್ನ ಖಾಸಗಿ ಖಾತೆಗೆ ಚಾಲನೆ ನೀಡುತ್ತಿದ್ದೇನೆ, ನಿಮ್ಮ ಅಭಿಪ್ರಾಯಗಳು, ನಿಲುವುಗಳನ್ನು ಹಂಚಿಕೊಳ್ಳಬಹುದು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಖಾಸಗಿ ಟ್ವೀಟ್ ಖಾತೆಗೆ ಈಗಾಗಲೇ 2,480 ಕ್ಕೂ ಹೆಚ್ಚು ಜನರು ಅನುಯಾಯಿಗಳಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಟ್ವೀಟ್ ಖಾತೆಗೆ 232 ಅನುಯಾಯಿಗಳಿದ್ದಾರೆ.