ಬೆಂಗಳೂರು: 2014ರ ಸಾಮೂಹಿಕ ಅತ್ಯಾಚಾರ ಕೇಸಿನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಅಪರಾಧಿ ಎಂದು ಸಾಬೀತಾದ ಯುವಕನಿಗೆ ಮಕ್ಕಳ ಸ್ನೇಹಿ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬೆಂಗಳೂರಿನ ನಂದಿನಿ ಲೇ ಔಟ್ ನ ಕೃಷ್ಣಾನಂದ ನಗರದ 21 ವರ್ಷದ ಯುವಕ ಜಿ.ಮನೋಜ್ ಅಪರಾಧಿಯಾಗಿದ್ದಾನೆ. ಪ್ರಕರಣದ ಮುಖ್ಯ ಆರೋಪಿ ಎನ್.ಲೋಕೇಶ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾನೆ.
ಇದೊಂದು ಹೇಯಕೃತ್ಯ ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಯಾದವ ವನಮಾಲಾ ಬಣ್ಣಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಮಕ್ಕಳ ಸ್ನೇಹಿ ಕೋರ್ಟ್ ನ ಮೊದಲ ತೀರ್ಪು ಪ್ರಕರಣ ಇದಾಗಿದೆ ಎನ್ನಬಹುದು.
2014, ಡಿಸೆಂಬರ್ 9ರಂದು ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ರಾಜೀವ್ ಗಾಂಧಿ ನಗರದಲ್ಲಿ ಲೋಕೇಶ್ ಎಂಬ ಯುವಕ ಅಪ್ರಾಪ್ತೆಯನ್ನು ದಾರಿಯಲ್ಲಿ ತಡೆಹಿಡಿದನು. ಅಪ್ರಾಪ್ತೆ ಬಾಲಕಿ ಮನೆಗೆ ಹಿಂತಿರುಗುತ್ತಿದ್ದಳು. ಆಕೆ ಸಹಾಯಕ್ಕಾಗಿ ಕೂಗಿದಾಗ ಚಾಕು ತೋರಿಸಿ ಬೆದರಿಸಿದನು. ನಂತರ ಮತ್ತೊಬ್ಬ ಆರೋಪಿ ಮನೋಜ್ ಆಕೆ ಧರಿಸಿದ್ದ ಚೂಡಿದಾರದ ಶಾಲಿನಿಂದ ಬಾಲಕಿಯ ಮುಖ ಮುಚ್ಚಿದನು. ನಂತರ ಇಬ್ಬರು ಆರೋಪಿಗಳು ಬಾಲಕಿಯನ್ನು ಉದ್ಯಾನವನದ ಹಿಂದೆ ಶನಿಮಹಾತ್ಮ ದೇವಸ್ಥಾನದ ಬಳಿಯ ಪೊದೆಯೊಂದರ ಹತ್ತಿರ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ.
ಮಗಳನ್ನು ಹುಡುಕಿಕೊಂಡು ತಾಯಿ ಬಂದಾಗ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಮಗಳನ್ನು ಮನೆಗೆ ಕರೆದುಕೊಂಡು ಬಂದ ತಾಯಿ ನಂದಿನಿ ಲೇ ಔಟ್ ಪೊಲೀಸರಿಗೆ ದೂರು ನೀಡಿದರು.
ಅತ್ಯಾಚಾರವೆಸಗಿದ ಆರೋಪಿಗಳನ್ನು ನಂತರ ಬಂಧಿಸಲಾಯಿತು.ಭಾರತೀಯ ದಂಡಸಂಹಿತೆ ಸೆಕ್ಷನ್ 376(2)(ಜಿ)ಯಡಿ ಮತ್ತು ಪೊಕ್ಸೊ ಕಾಯ್ದೆಯಡಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics