ಪತ್ರಕರ್ತ ರವಿ ಬೆಳಗೆರೆ 
ರಾಜ್ಯ

ಕತ್ತಲ ಜಗತ್ತನ್ನು ಸಾರ್ವಜನಿಕರಿಗೆ ಪರಿಚಯಿಸಿದ ಪತ್ರಕರ್ತ ರವಿ ಬೆಳಗೆರೆ

ಪತ್ರಕರ್ತ ರವಿ ಬೆಳಗೆರೆ (60) ತನ್ನ ವಿಶಿಷ್ಟ ಮತ್ತು ಆಕರ್ಷಕ ಬರವಣಿಗೆಯಿಂದ ಹೆಸರಾದರು. ಅವರ ಪತ್ರಿಕೆ 'ಹಾಯ್ ಬೆಂಗಳೂರು' 1995 ರಲ್ಲಿ ಪ್ರಾರಂಭವಾಗಿದ್ದು

ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ (60) ತನ್ನ ವಿಶಿಷ್ಟ ಮತ್ತು ಆಕರ್ಷಕ ಬರವಣಿಗೆಯಿಂದ ಹೆಸರಾದರು. ಅವರ ಪತ್ರಿಕೆ 'ಹಾಯ್ ಬೆಂಗಳೂರು' 1995 ರಲ್ಲಿ ಪ್ರಾರಂಭವಾಗಿದ್ದು ಬೆಂಗಳೂರಿನ ಪದ್ಮನಾಭನಗರ ಕಛೇರಿಯಿಂದ ಪ್ರಕಟವಾಗುತ್ತಿದೆ, ಅಂದೊಮ್ಮೆ  ಬೆಳಗೆರೆ ಅವರ ಬೆಂಗಳೂರಿನ ಅಂಡರ್ ವರ್ಲ್ಡ್ ಕುರಿತ ಸರಣಿ ಅಂಕಣ 'ಪಾಪಿಗಳ ಲೋಕದಲ್ಲಿ' ಅತ್ಯಂತ ಜನಪ್ರಿಯತೆ ಗಳಿಸಿತ್ತು,  ಈ ಅಂಕಣವು ಹಿಂದಿನ ಎಲ್ಲಾ ಅಂಕಣಗಳಿಗಿಂತ ಹೆಚ್ಚು ನಿಖರವಾಗಿ ಕತ್ತಲ ಜಗತ್ತನ್ನು ಸಾರ್ವಜನಿಕರೆದುರು ತೆರೆದಿಟ್ಟಿತ್ತು.
ಅಂಕಣದ ಜನಪ್ರಿಯತೆಯಿಂದಾಗಿ ರವಿ ಇದೇ ಹೆಸರಿನಲ್ಲಿ ಅದನ್ನು ಪುಸ್ತಕವಾಗಿ ಪ್ರಕಟಿಸಿದ್ದರು. ಆ ಪುಸ್ತಕ ಎರಡು ಭಾಗಗಳಲ್ಲಿ ಹೊರಬಂದಿತು.  ಅದೂ ಸಹ ಬೆಸ್ಟ್ ಸೆಲ್ಲರ್ ಪುಸ್ತಕಗಳ ಸಾಲಿಗೆ ಸೇರ್ಪಡೆಗೊಂಡಿತು. ದಾವೂದ್ ಇಬ್ರಾಹಿಂ ಜೀವನ ಕುರಿತಂತೆ ಅವರ ಇನ್ನೊಂದು ಪುಸ್ತಕ ಡಿ-ಕಂಪೆನಿ, ಅಂಡರ್ ವರ್ಲ್ಡ್ ಡಾನ್ ಮುತ್ತಪ್ಪ ರೈ ಅವರೊಂದಿಗೆ ಸಂಭಾಷಣೆಗಳನ್ನು ಸಹ ಅವರು ಬರೆದಿದ್ದರು. ಪೊಲೀಸ್ ಅಧಿಕಾರಿಗಳಿಂದ ರಾಜಕಾರಣಿಗಳು, ಕುಸ್ತಿಪಟುಗಳು, ಬರಹಗಾರರು, ಗಾಯಕರು, ಹಗರಣಗಳು ಮತ್ತು ಭೂಗತ ಅಪರಾಧ, ಕ್ರೀಡೆ, ಸಾಹಿತ್ಯ ಹೀಗೆ ಅವರು ಮುಟ್ಟದ, ಬರೆಯದ ವಿಚಾರಗಳೇ ಇಲ್ಲ. ತಮ್ಮ ಪತ್ರಿಕೆಯನ್ನು ಪ್ರಕಟಿಸುವುದರಲ್ಲದೆ, ಅವರು ದೂರದರ್ಶನ ಮತ್ತು ಬೆಳ್ಳಿ ಪರದೆಯಲ್ಲಿ ಸಹ ತಮ್ಮ ಛ್ಹಾಪನ್ನು ತೋರಿದ್ದಾರೆ.  ಕ್ರೈಮ್ ಡೈರಿ, ಬೆಳಗೆರೆ ಧ್ವನಿಯಲ್ಲಿ ನಿರೂಪಿತವಾದ ಅಪರಾಧ ಪ್ರಸಂಗಗಳ ಕುರಿತ ಕಾರ್ಯಕ್ರಮ. ಖಾಸಗಿ ವಾಹಿನಿಯಲ್ಲಿ  ಪ್ರಸಾರವಾದ ಇದು  ಕನ್ನಡ ದಲ್ಲಿ ಪ್ರಸಾರವಾದ ಮೊದಲ ಅಪರಾಧ ಸಂಬಂಧಿತ  ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಅವರು ಗಣಿಧಣಿಗಳ ಮಾಲೀಕತ್ವದ ಖಾಸಗಿ ವಾಹಿನಿಯ ನೇತೃತ್ವ ವಹಿಸಿದ್ದರು ಆದರೆ ಶೀಘ್ರದಲ್ಲೇ ಅಲ್ಲಿಂದ ಹೊರಬಂದರು.
ಉತ್ತರ ಕರ್ನಾಟಕದ ಬಳ್ಳಾರಿ ಮೂಲದ ಬೆಳಗೆರೆ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಅವರು 1984 ರಲ್ಲಿ ಬೆಂಗಳೂರಿಗೆ ಬಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಸರಣವನ್ನು ಹೊಂದಿರುವ ಕನ್ನಡ ದಿನಪತ್ರಿಕೆಗೆ ಸೇರ್ಪಡೆಗೊಳ್ಳುವ ಮೊದಲು ಸ್ವಲ್ಪ ಸಮಯದವರೆಗೆ ಒಂದು ಪಬ್ಲಿಷಿಂಗ್ ಹೌಸ್ ನಲ್ಲಿ ಕೆಲಸ ಮಾಡಿದರು. ರವಿ ಬೆಳಗೆರೆ೪ 50 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಹಲವು ಪುಸ್ತಕಗಳನ್ನು ಅನುವಾದಿಸಿದ್ದಾರೆ. ಅವರ ಇತ್ತೀಚಿನ ಪುಸ್ತಕ ರಾಜ್ ಲೀಲಾ ವಿನೋದ ಸಹ ಸಾಕಷ್ಟು ವಿವಾದ ಹುಟ್ಟುಹಾಕಿತ್ತು.
ಅವರು  ಓ ಮನಸೇ ಎನ್ನುವ ಪಾಕ್ಷಿಕ ನಿಯತಕಾಲಿಕವನ್ನು ಪ್ರಕಟಿಸಿದ್ದರು. ಆದರೆ ಅದು ದೀರ್ಘಾವಧಿಗೆ ನಡೆಯಲಿಲ್ಲ. ಅವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಮಾದ್ಯಮ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ  ಒಳಗೊಂಡಂತೆ ಅನೇಕ ಪುರಸ್ಕಾರಗಳು ಸಂದಿವೆ.  ಏತನ್ಮಧ್ಯೆ, ಅವರು ಪ್ರಾರ್ಥನಾ ಎಜುಕೇಶನ್ ಸೊಸೈಟಿಯನ್ನು ಪ್ರಾರಂಭಿಸಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.ಈ ಸಂಸ್ಥೆಯು . ಸೊಸೈಟಿಯು ವಿದ್ಯಾರ್ಥಿಗಳು ಅಥವಾ ಪೋಷಕರಿಂದ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ. ಅವರು ನಗರದಲ್ಲಿರುವ ಗಾಂಧಿ ಬಜಾರ್ ನಲ್ಲಿ ಬಿಬಿಸಿ (ಬೆಳಗೆರೆ ಬುಕ್ಸ್ ಅಂಡ್  ಕಾಫಿ) ಪುಸ್ತಕ ಮಳಿಗೆಯನ್ನು ತೆರೆದಿದ್ದು  ಬಿಬಿಎಂಪಿ ಗಾಂಧಿ ಬಜಾರ್ ಫುಟ್ ಪಾತ್ ವ್ಯಾಪಾರಿಗಳ ತೆರವಿಗೆ ನಿರ್ಧರಿಸಿದಾಗ ಬೆಳಗೆರೆ ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಬೆಳಗೆರೆ ಕೆಲವು ಚಲನಚಿತ್ರಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲಿ ಅವರು ಭೂಗತ ಡಾನ್ ಪಾತ್ರವನ್ನು ನಿರ್ವಹಿಸಿದ್ದಾರೆ. ತನ್ನ ವೆಬ್ ಸೈಟ್ ನ ಪ್ರಕಾರ, ಬೆಳಗೆರೆ ಎಡಪಂಥೀಯ ಸಿದ್ಧಾಂತದಿಂದ ಆಕರ್ಷಿತರಾಗಿದ್ದರು. ಆದರೆ ಅಲ್ಲಿಯೂ ಅವರಿಗೆ ನಿರಾಶೆ ಕಾದಿತ್ತು. ಇದೀಗ ಅವರು ಚಳುವಳಿಗಳು ಮತ್ತು ಪ್ರತಿಭಟನೆಗಳಿಂದ ದೂರ ಉಳಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

SCROLL FOR NEXT