ರಾಜ್ಯ

ಮಾರ್ಚ್ 1ರಿಂದ ಬಿಎಂಟಿಸಿಯ ಎಸಿ ಬಸ್ ಗಳಲ್ಲಿ ನಗದುರಹಿತ ವ್ಯವಹಾರ

Shilpa D

ಬೆಂಗಳೂರು: ಪ್ರಸಕ್ತ ವರ್ಷದ ಮಾರ್ಚ್ 1ರಿಂದ ಬಿಎಂಟಿಸಿ ಎಸಿ ವೊಲ್ವೋ ಬಸ್ ಗಳಲ್ಲಿ  ಕ್ಯಾಶ್ ಲೆಸ್ ವ್ಯವಹಾರ ಆರಂಭಿಸಲಿದೆ.  ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾಡುಗೋಡಿಗೆ ಸಂಚರಿಸುವ ಪೈಲಟ್ ಬಸ್ ಗಳಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ಬಳಸುವ ಸೌಲಭ್ಯ ಆರಂಭವಾಗಲಿದೆ.

ಏಪ್ರಿಲ್ ತಿಂಗಳ ಅಂತ್ಯದೊಳಗೆ  ಎಲ್ಲಾ ಮಾರ್ಗಗಳ ಬಿಎಂಟಿಸಿ ಬಸ್ ಗಳಲ್ಲಿ ಕ್ಯಾಶ್ ಲೆಸ್ ವ್ಯವಹಾರ ಪ್ರಾರಂಭವಾಗಲಿದೆ,  ಈ ತಿಂಗಳಾಂತ್ಯದ ವೇಳೆಗೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ  ಸ್ಮಾರ್ಟ್ ಕಾರ್ಡ್ ಗಳನ್ನು ಮಾರಾಟ ಮಾಡುವ ಕೌಂಟರ್ ತೆರೆಯಲಾಗುತ್ತದೆ.

ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಕ್ಯಾಶ್ ಲೆಸ್ ಸೌಲಭ್ಯ ಒದಗಿಸುತ್ತಿರುವ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಬಿಎಂಟಿಸಿ ಸಿಬ್ಬಂದಿಗೆ  ಪ್ರಾಯೋಗಿಕವಾಗಿ ಸ್ಮಾರ್ಟ್ ಕಾರ್ಡ್ ಸೌಲಭ್ಯ ಆರಂಭಿಸಿರುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 2016 ರಲ್ಲಿ ಬಿಎಂಟಿಸಿ ಮತ್ತು ಆ್ಯಕ್ಸಿಸ್ ಬ್ಯಾಂಕ್ ಸೇರಿ ಆ್ಯಕ್ಸಿಸ್ ಬ್ಯಾಂಕ್  ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲಾಗಿದ್ದು, ಕಾರ್ಡ್ ಬಳಸಿ ಮೆಷಿನ್ ಗಳಿಂದ ಟಿಕೆಟ್ ಪಡೆಯಬಹುದಾಗಿತ್ತು. ಇದರಿಂದ ಬಸ್ ಗಳಲ್ಲಿ ಸ್ಮಾರ್ಟ್ ಕಾರ್ಡ್ ಆರಂಭಿಸುವ ಯೋಜನೆ ಹೊಳೆಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಮಾರ್ಟ್ ಕಾರ್ಡ್ ಬಳಕೆಯಿಂದ ಕಂಡಕ್ಟರ್ ಗಳಿಗೆ ಅನುಕೂಲವಾಗಲಿದೆ. ಬಿಎಂಟಿಸಿಯಲ್ಲಿ ಪಡೆದುಕೊಳ್ಳುವ ಕಾರ್ಡ್ ಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಮೆಟ್ರೋಗೆ ಬಳಸಲು ಸಾಧ್ಯವಾಗುವುದಿಲ್ಲ, ಬಿಎಂ ಆರ್ ಸಿಎಲ್ ಜೊತೆ ಮಾತುಕತೆ ನಡೆಸಿ, ಬಿಎಂಟಿಸಿ ಮತ್ತು ಬಿಎಂಆರ್ ಸಿಎಲ್ ಗೆ ಒಂದೇ ಕಾರ್ಡ್ ಬಳಸಬಹುದಾಗಿದೆ.ಬಿಎಂಟಿಸಿಯ ಸ್ಮಾರ್ಟ್ ಕಾರ್ಡ್ ಗಳಿಂದ ಪ್ರಯಾಣಿಕರು ಎಲ್ಲಾ ಮಾಲ್ ಗಳು ಹಾಗೂ ಶಾಪ್ ಗಳಲ್ಲೂ ಖರೀದಿ ಮಾಡಬಹುದಾಗಿದೆ.

SCROLL FOR NEXT