ಶಶಿಕಲಾ 
ರಾಜ್ಯ

ಶಶಿಕಲಾ ಪಕ್ಕದ ಸೆಲ್ ನಲ್ಲಿದ್ದ ಸೈನೈಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕೊಠಡಿಯ ಪಕ್ಕದ ಸೆಲ್‌ನಲ್ಲಿದ್ದ ಸರಣಿ ಕೊಲೆಗಳ ಹಂತಕಿ ...

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕೊಠಡಿಯ ಪಕ್ಕದ ಸೆಲ್‌ನಲ್ಲಿದ್ದ ಸರಣಿ ಕೊಲೆಗಳ ಹಂತಕಿ ಸೈನೈಡ್ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಮಲ್ಲಿಕಾ ಮೊದಲು ಹಿಂಡಲಗಾ ಜೈಲಿನಲ್ಲೇ ಇದ್ದಳು. ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತರಲಾಗಿತ್ತು.

ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ ಆಕೆಯನ್ನು ಮತ್ತೆ ಸ್ಥಳಾಂತರ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಶಶಿಕಲಾ ಅವರಿಗೆ ಭದ್ರತೆ ಒದಗಿಸುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ಶಶಿಕಲಾ ಮತ್ತು ಮಲ್ಲಿಕಾ ಜೈಲಿನಲ್ಲಿ ಒಳ್ಳೆಯ ಗೆಳೆಯರಾಗಿದ್ದರು. ಶಶಿಕಲಾರನ್ನ ಕ್ಯೂನಲ್ಲಿ ನಿಲ್ಲಲು ಬಿಡದೇ ತಾನೇ ಊಟ ತಂದು ಕೊಡುತ್ತಿದ್ದರೆಂದು, ಆ ಕಾರಣಕ್ಕಾಗಿ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಿಎಂ ಜಯಲಲಿತಾ ಅವರ ಅಪ್ಪಟ ಅಭಿಮಾನಿಯಾಗಿದ್ದ ಮಲ್ಲಿಕಾ 2014 ರಲ್ಲಿ ಜಯಲಲಿತಾರನ್ನು ಭೇಟಿ ಮಾಡಲು ಯತ್ನಿಸಿ ನಿರಾಶರಾಗಿದ್ದರು.

ಆರು ಮಹಿಳೆಯರನ್ನು ಕೊಂದ ಕಾರಣಕ್ಕೆ ಜೈಲಿಗೆ ಹೋದ ಹಂತಕಿಯರಲ್ಲಿ ಸೈನೈಡ್ ಮಲ್ಲಿಕಾ ಪ್ರಮುಖವಾದವಳು. ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಪರಿಚಯ ಆಪ್ತವಾಗುತ್ತಿದ್ದಂತೆ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದಳು ನಂತರ ಮಹಿಳೆಯರ ಚಿನ್ನಾಭರಣ ದೋಚಿ  ಪರಾರಿಯಾಗುತ್ತಿದ್ದಳು. 2008ರಲ್ಲಿ ಈಕೆಯನ್ನು ಬಂಧಿಸಲಾಗಿತ್ತು.

ಹಿಂಡಲಗಾ ಜೈಲು ದೇಶದಲ್ಲಿಯೇ ಅತಿ ಹಳೇಯ ಕಾರಾಗೃಹವಾಗಿದೆ, ಮರಣದಂಡನೆಗೆ ಗುರಿಯಾಗಿರುವ ಹಲವು ಅಪರಾಧಿಗಳು ಹಿಂಡಲಗಾ ಜೈಲಿನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT