ಮಂಡ್ಯದ ಮಾಜಿ ಸಂಸದೆ ಮತ್ತು ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ
ನವದೆಹಲಿ: ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಮಂಡ್ಯದ ಮಾಜಿ ಸಂಸದೆಯೂ ಆಗಿರುವ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ, ಟ್ವೀಟ್ ಮಾಡಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷರು ಒಂದು ವೇಳೆ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದರೂ ಅದರಲ್ಲಿ ವಿಶೇಷವಿಲ್ಲ. ಆದರೆ, ಪ್ರಧಾನಿ ಖಾಸಗಿ ಹಾಗೂ ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಮಾತನಾಡಿಲ್ಲ. ಜರ್ಮನಿಯ ಹ್ಯಾಮ್ ಬ್ರರ್ಗ್ ನಲ್ಲಿ ನಡೆದ ಜಿ.20 ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರನ್ನು ಭೇಟಿ ಮಾಡಿದರೂ ಮೋದಿಯವರು ಈ ವಿಷಯವನ್ನು ಎತ್ತಿಲ್ಲ ಎಂದು ಕುಟುಕಿದ್ದಾರೆ.
ಚೀನಾದ ಆಕ್ರಮಣ ನಡೆಯುತ್ತಿರುವಾಗಲೇ ಕ್ಸಿ ಜಿನ್ ಪಿಂಗ್ ಅವರನ್ನು ಮೋದಿ ಭೇಟಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಮಾತನಾಡಬೇಕು ಎಂಬುದು ನಮ್ಮ ದುರ್ಬಲ ಪ್ರಧಾನಿಗಳಿಗೆ ಗೊತ್ತಾಗಿಲ್ಲ ಎಂದು ಟೀಕಿಸಿ ಮೋದಿ-ಜಿನ್ ಪಿಂಗ್ ಭೇಟಿ ಫೋಟೋ ಪ್ರಕಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics