ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯ 
ರಾಜ್ಯ

ರಂಗಯ್ಯನದುರ್ಗ ಅಭಯಾರಣ್ಯ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆ

ನಾಲ್ಕು ಕೊಂಬಿನ ಚಿಗರೆಗಳಿರುವ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯ ಅಂತಿಮವಾಗಿ ಸೂಕ್ಷ್ಮ ಪರಿಸರ...

ಬೆಂಗಳೂರು: ನಾಲ್ಕು ಕೊಂಬಿನ ಚಿಗರೆಗಳಿರುವ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯ ಅಂತಿಮವಾಗಿ ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲ್ಪಟ್ಟಿದೆ. 
ಇದರಿಂದಾಗಿ ಈ ಪ್ರದೇಶದಲ್ಲಿ ಪ್ರಾಣಿಗಳ ಭೇಟೆ, ನಷ್ಟ ಹಾಗೂ ವಿಭಜನೆ ತಪ್ಪಿ ಸಂರಕ್ಷಿತ ವಲಯವಾಗಲಿದೆ.
ಸೂಕ್ಷ್ಮ ಪರಿಸರ ವಲಯ ಪ್ರದೇಶ ಒಟ್ಟು 137.14 ಸ್ಕ್ವೇರ್ ಕಿಮೀ ಅಭಯಾರಣ್ಯದ ವರೆಗೂ ಒಳಪಟ್ಟಿದೆ. ಸುಮಾರು 30 ಗ್ರಾಮಗಳು ಈ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಹಲವು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳು ನಿಷೇಧಗೊಳ್ಳಲಿವೆ,
77.24 ಸ್ಕ್ವೇರ್  ಕಿಮೀ ಪ್ರದೇಶವನ್ನು ರಂಗಯ್ಯನದುರ್ಗ ವನ್ಯಜೀವಿ ಅಭಯಾರಣ್ಯ ಎಂದು 2011ರ ಜನವರಿಯಲ್ಲಿ ಗುರುತಿಸಲಾಯಿತು. ನಂತರ ಅಲ್ಲಿರುವ ಪ್ರಾಣಿ ಪ್ರಬೇಧಗಳಿಗೆ ವಿಶೇಷ ಸ್ಥಾನಮಾನ ದೊರಕಿತು. 
ಭಾರತದಲ್ಲಿ ಅತಿ ಅಪರೂಪಕ್ಕೆ ಕಾಣ ಸಿಗುವ 4 ಕೊಂಬಿನ ಹುಲ್ಲೆ ಅಥವಾ ಚಿಗರೆಗಳು ಇಲ್ಲಿತ್ತು ಕ್ರಮೇಣ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತು. ಈ ಪ್ರಬೇಧದ ಪ್ರಾಣಿಯ ಜೀವಕ್ಕೆ ಬೆದರಿಕೆ ಬಂದೊದಗಿದೆ. 
ಪ್ರಾಣಿಗಳ ಆವಾಸ ಸ್ಥಾನವನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವಾಗ ಅಲ್ಲಿ ಅಸಾಮಾನ್ಯವಾದ ತಲೆಬುರುಡೆ, ಹಾಗೂ ನಾಲ್ಕು ಕೊಂಬುಗಳು ಭೇಟೆಗಾರರಿಗೆ ಸಿಕ್ಕಿವೆ. ಜೊತೆಗೆ ಮಾಂಸಕ್ಕಾಗಿ ಕೂಡ ಭೇಟೆಯಾಡಲಾಗುತ್ತದೆ. 
ಈ ನಾಲ್ಕು ಕೊಂಬುಗಳುಳ್ಳ ಹುಲ್ಲೆಗಳು ಕಾಣ ಸಿಗುವುದು ಬಹಳ ಅಪರೂಪ. ಇವು ಬಹಳ ನಾಚಿಕೆ ಸ್ವಭಾವವದ್ದು,  ಇವುಗಳ ಸಂಖ್ಯೆ ಎಷ್ಟಿವೆ ಎಂಬ ಬಗ್ಗೆ ನಿಖರವಾಗಿಲ್ಲ ಎಂದು ಬಳ್ಳಾರಿ ಡಿಸಿಎಫ್ ಟಿ.ಎಸ್ ರಣಾವತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT