ರಾಜ್ಯ

ಮೈಸೂರು: ಸಾರ್ವಜನಿಕ ಸೈಕಲ್‌ ಬಳಕೆ ಯೋಜನೆ ಟ್ರಿಣ್‌ ಟ್ರಿಣ್‌ ಗೆ ಸಿಎಂ ಚಾಲನೆ

Shilpa D
ಮೈಸೂರು: ಕಾರಿನಲ್ಲಿಯೇ ಸದಾ ಸಂಚರಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾನುವಾರ ಸೈಕಲ್ ಏರಿ ಟ್ರಿಣ್ ಟ್ರಿಣ್ ಸೌಂಡ್ ಮಾಡಿದ್ರು..
ವಾಹನ ದಟ್ಟಣೆ ಕಡಿಮೆ ಮಾಡಿ ಪರಿಸರ ಕಾಪಾಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸಾರ್ವಜನಿಕ ಸೈಕಲ್‌ ಬಳಕೆ ಯೋಜನೆ ‘ಟ್ರಿಣ್‌ ಟ್ರಿಣ್‌’ಗೆ ಸಿಎಂ ಚಾಲನೆ ನೀಡಿದರು. 
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಿರ್ಮಿಸಿರುವ ಸೈಕಲ್‌ ನಿಲುಗಡೆ ಕೇಂದ್ರದ ಬಳಿ ಐದು ನಿಮಿಷ ಸೈಕಲ್‌ ಸವಾರಿ ಮಾಡಿದರು.
ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ಹಿಂದಿಕ್ಕಿ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಸಾರ್ವಜನಿಕರು ನಗರದ ವಿವಿಧ ಸ್ಥಳಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು. 52 ಡಾಕಿಂಗ್‌ (ಸೈಕಲ್‌ ನಿಲುಗಡೆ ಕೇಂದ್ರ) ನಿರ್ಮಿಸಲಾಗಿದ್ದು, 450 ಸೈಕಲ್‌ಗಳು ಬಾಡಿಗೆಗೆ ಲಭ್ಯ ಇವೆ. ರು. 350 ಶುಲ್ಕ ನೀಡಿ ನೋಂದಾಯಿಸಿಕೊಳ್ಳಬೇಕು. 20 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದ ಅವರು ಬೆಂಗಳೂರಿನಲ್ಲಿಯೂ ಈ ವರ್ಷ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ.
ನಗರದಲ್ಲಿ 12 ಲಕ್ಷ  ಜನಸಂಖ್ಯೆ ಇದ್ದು, ಆರೂವರೆ ಲಕ್ಷ ವಾಹನಗಳಿವೆ. ಜಗತ್ತಿನ 600 ನಗರಗಳಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ಇದೆ. ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ಪರಿಸರ ಸ್ನೇಹಿ ವಾಹನಗಳ ಸಂಚಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದ್ದಾರೆ.
SCROLL FOR NEXT