ಬಾಗಲಕೋಟೆ: ದುರಂತ ಘಟನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಅನವಲ್- ಯೆಂಡಿಗೆರಿ ರಸ್ತೆಯಲ್ಲಿ ಕಳೆದ ರಾತ್ರಿ ಸುರಿದ ಅವ್ಯಾಹತ ಮಳೆಗೆ ಕಾರು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದ ನಾಲ್ವರ ಮೃತದೇಹ ಸಿಕ್ಕಿದೆ.
ಐದನೇ ವ್ಯಕ್ತಿ ಕಾರಿನಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿದ್ದ ಪ್ರಯಾಣಿಕರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನವರಾಗಿದ್ದಾರೆ. ಅವರು ಕರಡುಗುಡ್ಡಿಯಿಂದ ಬಾದಾಮಿ ತಾಲ್ಲೂಕಿನ ಯೆಂಡಿಗೆರೆಗೆ ಪ್ರಯಾಣಿಸುತ್ತಿದ್ದರು. ಮೃತ ದುರ್ದೈವಿಗಳನ್ನು ಹೊಳೆಬಸಪ್ಪ ಶಿರಗುಪ್ಪಿ, ಯಮನಪ್ಪ ಹಡಪದ್, ಅಶೋಕ್ ನೀಲಪ್ಪನವರ್ ಮತ್ತು ರುದ್ರಪ್ಪ ಗುರುಪ್ಪನವರ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ರಾಮದುರ್ಗ ತಾಲ್ಲೂಕಿನವರಾಗಿದ್ದಾರೆ.
ಕೆರೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.