ರಾಜ್ಯ

ಧಾರವಾಡ: ರೈತರಿಗೆ ಆಘಾತ ತಂದ ಬೆಳೆ ವಿಮೆ

Sumana Upadhyaya
ಧಾರವಾಡ: ಪ್ರಧಾನ  ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರ ಹೆಸರಿನಲ್ಲಿ ಸರ್ಕಾರ ಠೇವಣಿಯಿಟ್ಟ ಬೆಳೆ ವಿಮೆ ಧಾರವಾಡ ತಾಲ್ಲೂಕಿನ ಹರೊಬೆಳವಾಡಿ ಗ್ರಾಮದ ರೈತರನ್ನು ಬೆಚ್ಚಿ ಬೀಳಿಸಿದೆ.
ಬೆಳೆ ಸಾಲವೆಂದು ಇಲ್ಲಿನ ಕೆಲ ರೈತರು ಕೇವಲ ಒಂದು ರೂಪಾಯಿ ಪಡೆದರೆ ಇನ್ನು ಕೆಲವರಿಗೆ ಸಾಲವಾಗಿ ಎರಡು ಅಂಕೆಯಷ್ಟು ಮಾತ್ರ ಹಣ ಸಿಕ್ಕಿದೆ. ರಬಿ ಬೆಳೆ ವಿಮೆಗಾಗಿ ಕಾದು ಕುಳಿತಿದ್ದ ರೈತರು ಕಳೆದ ಗುರುವಾರ ಬ್ಯಾಂಕಿನಲ್ಲಿ ತಮ್ಮ ಪಾಸ್ ಪುಸ್ತಕವನ್ನು ನವೀಕರಿಸಲು ಹೋದ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. 
 ದೇಶದಲ್ಲಿ ಸುಮಾರು 88,000 ಮಂದಿ ರೈತರು ಫಸಲ್ ಭೀಮಾ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಹೊಂದಿದ್ದಾರೆ.  ಕೆಲವು ರೈತರ ಖಾತೆಗಳು ಆಧಾರ್ ಮತ್ತು ಪ್ಯಾನ್ ಕಾರ್ಡಿಗೆ ಸಂಪರ್ಕ ಹೊಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅಧಿಕಾರಿಗಳು ಸಮೀಕ್ಷೆ ನಡೆಸಿ ಖಾತೆಗಳನ್ನು ದೃಢಪಡಿಸಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುವುದು. ಸುಮಾರು 3,500 ಖಾತೆಗಳಿಗೆ ಸರಿಯಾದ ದಾಖಲೆಗಳಿಲ್ಲ ಎನ್ನುತ್ತಾರೆ ಅಧಿಕಾರಿಗಳು.
SCROLL FOR NEXT