ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಅಪಾರ ಜನದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಭದ್ರತಾ ಸಿಬ್ಬಂದಿ
ಬೆಂಗಳೂರು: 'ನಮ್ಮ ಮೆಟ್ರೊ' ದ ಮೊದಲ ಹಂತ ಪೂರ್ಣ ಪ್ರಮಾಣದಲ್ಲಿ ಆರಂಭವಾದ ನಂತರ ಬೆಂಗಳೂರು ನಗರದಲ್ಲಿ ನಿನ್ನೆಯ ದಿನವಾದ ಸೋಮವಾರ ಎರಡು ಮಹತ್ವದ ಮೈಲುಗಲ್ಲು ಸಾಧಿಸಿದೆ. ನೇರಳೆ ಮತ್ತು ಹಸಿರು ಎರಡೂ ಮೆಟ್ರೊ ಮಾರ್ಗಗಳಲ್ಲಿ 3,07,543 ಮಂದಿ ಪ್ರಯಾಣಿಕರು ನಿನ್ನೆ ರಾತ್ರಿ 10 ಗಂಟೆ ಹೊತ್ತಿಗೆ ಪ್ರಯಾಣಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಹೆಚ್ಚಳವಾಗಿದೆ.
2 ನಿಮಿಷಗಳ ವ್ಯತ್ಯಾಸದಲ್ಲಿ 3 ವಿಶೇಷ ರೈಲುಗಳು ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಬೆಳಗ್ಗೆ 9.40ರಿಂದ 10.30ರೊಳಗೆ ಸಂಚರಿಸಿವೆ. ನಮ್ಮ ಮೆಟ್ರೊದ 6 ವರ್ಷಗಳ ಇತಿಹಾಸದಲ್ಲಿ 4 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸಂಚರಿಸಿದ್ದು ನಿನ್ನೆಯೇ ಮೊದಲು.
ನಿನ್ನೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯೊಳಗೆ ನೇರಳೆ ಮತ್ತು ಹಸಿರು ಬಣ್ಣದ ಮೆಟ್ರೊ ಮಾರ್ಗಗಳಲ್ಲಿ ಮೊದಲ ಬಾರಿಗೆ ಸಂಚರಿಸಿದೆ. ನಾಗಸಂದ್ರದಿಂದ ಯೆಲಚೇನಹಳ್ಳಿಯಿಂದ ಬೈಯಪ್ಪನಹಳ್ಳಿಯ ಸುತ್ತಮುತ್ತಲ ಐಟಿ ಉದ್ಯೋಗಿಗಳು ನಿನ್ನೆ ಮೆಟ್ರೊದಲ್ಲಿ ಸಂಚರಿಸಿದ್ದು ಕಂಡುಬಂತು. ಬಿಎಂಟಿಸಿ ಫೀಡರ್ ಬಸ್ ಸೇವೆಗಳು ಮತ್ತು ಆಫೀಸ್ ಕ್ಯಾಬ್ ಸೇವೆಗಳು ಬೈಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆಯಿಂದ ಐಟಿ ಕಂಪೆನಿಗಳು ಹೆಚ್ಚಾಗಿರುವ ಐಟಿಪಿಎಲ್, ವೈಟ್ ಫೀಲ್ಡ್ ಮತ್ತು ಕೆ.ಆರ್.ಪುರಂಗೆ ಇವೆ.