ಸಾಂದರ್ಭಿಕ ಚಿತ್ರ 
ರಾಜ್ಯ

ತೀವ್ರ ಬರದ ನಡುವೆಯೂ ಎಂಎಲ್ ಸಿಗಳಿಗಾಗಿ 13 ಹೊಸ ಕಾರು ಖರೀದಿಸಿದ ರಾಜ್ಯ ಸರ್ಕಾರ

ರಾಜ್ಯಾದ್ಯಂತ ತೀವ್ರ ಬರ ತಾಂಡವವಾಡುತ್ತಿದೆ. ಸತತ ಬರದಿಂದಾಗಿ ಜನ ಸಾಮಾನ್ಯರ ಬದುಕು ಜರ್ಜರಿತವಾಗುತ್ತಿದೆ. ಇಂಥ ಪರಿಸ್ಥಿತಿಯ ನಡುವೆಯೂ ರಾಜ್ಯ ..

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಬರ ತಾಂಡವವಾಡುತ್ತಿದೆ. ಸತತ ಬರದಿಂದಾಗಿ ಜನ ಸಾಮಾನ್ಯರ ಬದುಕು ಜರ್ಜರಿತವಾಗುತ್ತಿದೆ. ಇಂಥ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಬಿಟ್ಟು ವಿಧಾನ ಪರಿಷತ್ ಸದಸ್ಯರುಗಳಿಗಾಗಿ ಹೊಸ ಕಾರು ಖರೀದಿಸಿದೆ.

13 ಹೊಸ ಮಾರುತಿ ಸ್ವಿಫ್ಟ್ ಡಿಸೈರ್ ಕಾರುಗಳನ್ನು ಸರ್ಕಾರ 1.ಕೋಟಿ ರು ವೆಚ್ಚದಲ್ಲಿ ಖರೀದಿಸಿದೆ.  ಈ ಕಾರುಗಳು ಶಾಸಕರ ಭವನದ ಆಡಳಿತದ ನಿಯಂತ್ರಣಕ್ಕೊಳಪಡುತ್ತವೆ.

ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲಿರುವಾಗ ಅವರು ಇದನ್ನು ಬಳಸಬಹುದಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಡುವೆಯೂ ಕಾರು ಖರೀದಿ ಅಗತ್ಯವಿತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ, 1 ಲಕ್ಷ ಕಿ ಮೀ ದೂರ ಪ್ರಯಾಣ ಮಾಡಿರುವ ಹಲವು ಹಳೇಯ ಕಾರುಗಳನ್ನು ಮಾರಾಟ ಮಾಡಲಾಗಿದೆ, ಸರ್ಕಾರದ ಮಾರ್ಗದರ್ಶನದ ಮೇಲೆ ಹಳೇಯ ಕಾರುಗಳ ಬದಲಿಗೆ ಹೊಸ ಕಾರುಗಳನ್ನು ಖರೀದಿಸಲಾಗಿದೆ, ಕೆಲವೊಂದು ಕಾರುಗಳು 2 ಲಕ್ಷ ಕಿಮೀ ಕ್ರಮಿಸಿದ್ದವು, ಈ ಕಾರುಗಳು ಪದೇ ಪದೇ ರಿಪೇರಿಗೆ ಬರುತ್ತಿದ್ದವು, ಅವುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದ ಹೊಸ ಕಾರುಗಳನ್ನು  ಖರೀದಿಸಲಾಗಿದೆ ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯರು ಈ ಕಾರುಗಳನ್ನು ಬೆಂಗಳೂರು ನಗರದೊಳಗೆ ಉಪಯೋಗಿಸಬಹುದಾಗಿದೆ. ಪ್ರತಿ ಕೀಮೀ ಗೆ 8 ರು. ದರ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT