ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮಂಗಳೂರು: ತಣ್ಣೀರ್ ಬಾವಿ ಟ್ರೀ ಪಾರ್ಕ್, ಲೈಬ್ರರಿಗೆ ದುಷ್ಕರ್ಮಿಗಳಿಂದ ಬೆಂಕಿ

ಮಂಗಳೂರಿನ ಕಡಲ ತೀರದಲ್ಲಿರುವ ತಣ್ಣೀರ್ ಬಾವಿ ಟ್ರೀ ಪಾರ್ಕ್ ಗೆ ಅಪರಿಚಿತ ದುಷ್ಕರ್ಮಿಗಳು ಬುಧವಾರ ಮುಂಜಾನೆ ಬೆಂಕಿ ಹಚ್ಚಿರುವ

ತಣ್ಣೀರ್ ಬಾವಿ ಪಾರ್ಕ್
Shilpa D
Updated On : 30 Mar 2017, 12:54 pm

ಮಂಗಳೂರು: ಮಂಗಳೂರಿನ ಬೀಚ್ ನಲ್ಲಿರುವ ತಣ್ಣೀರ್ ಬಾವಿ ಟ್ರೀ ಪಾರ್ಕ್ ಗೆ ಅಪರಿಚಿತ ದುಷ್ಕರ್ಮಿಗಳು ಬುಧವಾರ ಮುಂಜಾನೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಗ್ರಂಥಾಲಯದಲ್ಲಿದ್ದ 500 ಪುಸ್ತಕಗಳು, ಮರದ ಕಲಾಕೃತಿಗಳು , ಕಿಯಾಸ್ಕ್ ಮತ್ತು ಅರಣ್ಯ ಇಲಾಖೆಯ ಟಿಕೆಟ್ ಕೌಂಟರ್  ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ,

ಕಿಡಿಗೇಡಿಗಳ ಕೃತ್ಯದಿಂದ ಸುಮಾರು 7 ಲಕ್ಷ ರು. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳು ಬೆಂಕಿ ಹಚ್ಚಲು ಇಂಧನ ಬಳಸಿದ್ದಾರೆ ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಈ ಸಂಬಂಧ ಅರಣ್ಯ ಇಲಾಖೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement