ರಾಜ್ಯ

ಸೆಮಿನಾರ್ ಗಳಿಗಾಗಿ ವಿದೇಶಕ್ಕೆ ತೆರಳುವ ಪ್ರಾಧ್ಯಾಪಕರಿಗೆ ಹೊಸ ನಿಯಮ

Srinivas Rao BV
ಬೆಂಗಳೂರು: ಸೆಮಿನಾರ್ ಗಳಲ್ಲಿ ಭಾಗವಹಿಸುವುದಕ್ಕಾಗಿ ವಿದೇಶಕ್ಕೆ ತೆರಳುವ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರುಗಳು ಇನ್ನು ಮುಂದೆ ಒಂದಷ್ಟು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ. 
ಕಾಲೇಜು ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದ್ದು, ಪ್ರಾಧ್ಯಾಪಕರುಗಳು ಭಾಗವಹಿಸುತ್ತಿರುವ ಸೆಮಿನಾರ್ ಹೆಸರು, ದೇಶ ಸೇರಿದಂತೆ ವಿದೇಶ ಪ್ರವಾಸದ ಪ್ರತಿಯೊಂದು ಮಾಹಿತಿಯನ್ನೂ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ   ಸೆಮಿನಾರ್ ಗಳಿಗೆ ಭಾಗವಹಿಸುವುದರ ಬಗ್ಗೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ. 
ಇಲಾಖೆಯ ವೆಬ್ ಸೈಟ್ ನಲ್ಲಿ ಹೊಸ ನಿಯಮಗಳ ಪಟ್ಟಿಯನ್ನು ಅಪ್ ಲೋಡ್ ಮಾಡಲಾಗಿದ್ದು, ವಿದೇಶ ಪ್ರವಾಸ ಕೈಗೊಂಡ ಪ್ರಾಧ್ಯಾಪಕರು ವಿದೇಶದಿಂದಲೇ ರಾಜೀನಾಮೆ ನೀಡುವಂತಿಲ್ಲ, ವಿದೇಶ ಪ್ರವಾಸದ ಅವಧಿಯನ್ನು ಅನಗತ್ಯವಾಗಿ ವಿಸ್ತರಿಸುವಂತಿಲ್ಲ ಎಂಬ ನಿಯಮಗಳನ್ನು ಸೇರಿಸಲಾಗಿದೆ. ಅಷ್ಟೇ ಅಲ್ಲದೇ ಅವರ ಸ್ವಂತ ಖರ್ಚು-ವೆಚ್ಚದಲ್ಲಿ ವಿದೇಶ ಪ್ರವಾಸ ಕೈಗೊಂಡರೆ ಅದರ ಸಂಪೂರ್ಣ ವಿವರವನ್ನೂ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.  
SCROLL FOR NEXT