ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 17 ವರ್ಷದ ಯುವತಿ ಅಪಹರಿಸಿ ಲಾಡ್ಜ್ ನಲ್ಲಿ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ

17 ವರ್ಷದ ಯುವತಿಯನ್ನು ಅಪಹರಿಸಿ ಲಾಡ್ಜ್ ವೊಂದರಲ್ಲಿ 10 ದಿನಗಳ ಕಾಲ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ತಡವಾಗಿ....

ಬೆಂಗಳೂರು: 17 ವರ್ಷದ ಯುವತಿಯನ್ನು ಅಪಹರಿಸಿ ಲಾಡ್ಜ್ ವೊಂದರಲ್ಲಿ 10 ದಿನಗಳ ಕಾಲ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. 
ಅಕ್ಚೋಬರ್ 26ರಂದು ಸ್ನೇಹಿತೆ ಆಹ್ವಾನಿಸಿದ ಪಾರ್ಟಿಗೆಂದು ಹೋದ 17 ವರ್ಷದ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ ನಗರದ ವೈಟ್ ಫೀಲ್ಡ್ ಸಮೀಪದ ಕ್ಲಾಸಿಕಲ್ ಇನ್ ಲಾಡ್ಜ್ ಗೆ ಕರೆದೊಯ್ದು ನಿರಂತರ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಕ್ಟೋಬರ್ 26 ರಿಂದ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕ್ಲಾಸಿಕಲ್ ಇನ್ ಲಾಡ್ಜ್‍ನಲ್ಲಿ ಯುವತಿಯೊಬ್ಬಳು ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಲಾಡ್ಜ್ ನಿಂದ ವಿದ್ಯಾರ್ಥಿನಿಯನ್ನು ನವೆಂಬರ್ 4ರಂದು ರಕ್ಷಣೆ ಮಾಡಿದ್ದಾರೆ.
ಯುವತಿ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಾದ ಉಡುಪಿ ಮೂಲದ ರಾಘವೇಂದ್ರ (27), ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ಪಂಡಿತ್(52), ದಾವಣಗೆರೆ ಮೂಲದ ಸಾಗರ್ (22) ಹಾಗೂ ಮೈಸೂರು ಮೂಲದ ಮಂಜು ರಾಜ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿಗಳು ಲಾಡ್ಜ್ ನ ಸಮೀಪದಲ್ಲೇ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಪಂಡಿತ್ ಲಾಡ್ಜ್ ನ ಮಾಲೀಕ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್‍ರೇಪ್) 368, 363, 343, 504, 506 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 26 ರಂದು ಸಂತ್ರಸ್ತ ಯುವತಿಯನ್ನು ಆಕೆಯ ಸ್ನೇಹಿತೆ ಪಾರ್ಟಿಗೆ ಆಹ್ವಾನಿಸಿ ವೈಟ್‍ಫೀಲ್ಡ್ ರೈಲ್ವೇ ನಿಲ್ದಾಣದ ಬಳಿ ಬರಲು ತಿಳಿಸಿದ್ದಳು. ಅಂದು ಸಂಜೆ 5 ಗಂಟೆಗೆ ಕರೆ ಮಾಡಿದ ಸ್ನೇಹಿತೆ ಪಾರ್ಟಿಗೆ ಬರುತ್ತಿರೋದನ್ನ ಖಚಿತಪಡಿಸಿಕೊಂಡಿದ್ದಳು. ಆದ್ರೆ ರಾತ್ರಿ 8 ಗಂಟೆಗೆ ಸ್ಥಳಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ತನ್ನ ಗೆಳತಿಯ ಸ್ನೇಹಿತರು ಎಂದು ರಾಘವೇಂದ್ರ ಹಾಗೂ ಸಾಗರ್ ಎಂಬ ಇಬ್ಬರು ಪರಿಚಯಿಸಿಕೊಂಡು ಪಾರ್ಟಿ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ನಂತರ ವಿದ್ಯಾರ್ಥಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್ ನಂ 6 ರಲ್ಲಿ ಇರಲು ತಿಳಿಸಿ ಆಕೆಯ ಗೆಳತಿ ಅಲ್ಲಿಗೆ ಬರುವುದಾಗಿ ಹೇಳಿದ್ದರು. ಆದ್ರೆ ಗೆಳತಿ ಮಾತ್ರ ಅಲ್ಲಿಗೆ ಬರಲಿಲ್ಲ. ಬದಲಿಗೆ ವಿದ್ಯಾರ್ಥಿನಿ ಕೊಠಡಿಗೆ ತೆರಳಿದ ಸ್ವಲ್ಪ ಸಮಯದ ನಂತರ ಆರೋಪಿ ರಾಘವೇಂದ್ರ ಹಾಗೂ ರಾಜ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್