ಆನೆಗಳ ದಾಳಿಯಿಂದ ರಕ್ಷಿಸಿ: ಭೀತಿಯಿಂದ ಕಣ್ಣೀರಿಡುತ್ತಿರುವ 8 ಗ್ರಾಮಗಳು
ಬೆಂಗಳೂರು: ಕೃಷಿ ಭೂಮಿಗಳ ಮೇಲೆ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿರುವುದರಿಂದ ಭೀತಿಗೊಳಗಾಗಿರುವ 8 ಗ್ರಾಮಗಳು ತಮ್ಮನ್ನು ರಕ್ಷಣೆ ಮಾಡುವಂತೆ ಕಣ್ಣೀರಿಡುತ್ತಿವೆ.
ಸಕಲೇಶಪುರ ತಾಲೂಕಿನ ಹೆತ್ತೂರ್ ಹೋಬ್ಳಿಯಲ್ಲಿರುವ ಅರಣ್ಯ ಪ್ರದೇಸದಲ್ಲಿರುವ 8 ಗ್ರಾಮಗಳ 150 ಕುಟುಂಬಗಳು ನಿರಂತರ ಆನೆಗಳ ದಾಳಿಯಿಂದಾಗಿ ಕಂಗಾಲಾಗಿವೆ. ಆನೆ ದಾಳಿ ಭೀತಿಗೊಳಗಾಗಿರುವ ಇಲ್ಲಿನ ಗ್ರಾಮಸ್ಥರು ಸರ್ಕಾರ ಸೂಕ್ತ ರೀತಿಯ ಪರಿಹಾರವನ್ನು ನೀಡದೇ ಹೋದಲ್ಲಿ 3,150 ಕೃಷಿ ಭೂಮಿಯನ್ನು ಬಿಟ್ಟು ತಮ್ಮ ಪೂರ್ವಜರ ಮನೆಗಳಿಗೆ ಶಾಶ್ವತವಾಗಿ ತೆರಳು ನಿರ್ಧರಿಸಿದ್ದಾರೆ.
ಕಳೆದ 10 ವರ್ಷಗಳಿಂದಲೂ ಆನೆ ದಾಳಿಗಳನ್ನು ಎದುರಿಸುತ್ತಿವೆ. ಸ್ಥಳಾಂತರ ಹಾಗೂ ಪುನರ್ವಸತಿ ಯೋಜನೆ, ಪರಿಹಾರ ಧನ ಕುರಿತಂತೆ ಇಲ್ಲಿನ ಜನತೆ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಮಾಡಿದ್ದರೂ ಇವುಗಳಿಗೆ ಯಾವುದೇ ರೀತಿಯ ಸ್ಪಂದನೆಗಳು ವ್ಯಕ್ತವಾಗಿಲ್ಲ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೇವರಾಜ್ ಅತ್ತಿಹಳ್ಳಿಯವರು, ಗ್ರಾಮದಲ್ಲಿ ನನಗೆ 2.5 ಎಕರೆ ಕೃಷಿ ಭೂಮಿಯಿದೆ. ಪ್ರತೀ 2-3 ದಿನಗಳಿಗೊಮ್ಮೆ 25-30 ಆನೆಗಳ ಹಿಂಡು ಗ್ರಾಮದ ಮೇಲೆ ದಾಳಿ ಮಾಡುತ್ತವೆ. ಈ ವೇಳೆ ದಾರಿಯಲ್ಲಿ ತಮಗೆ ಸಿಕ್ಕದ ಬೆಳೆಗಳನ್ನೆಲ್ಲಾ ನಾಶ ಮಾಡುತ್ತವೆ ಎಂದು ಹೇಳಿದ್ದಾರೆ.
ಈ ವರೆಗೂ ನಾವು 2-3 ಆನೆಗಳ ಗುಂಪನ್ನು ನೋಡಿದ್ದೇವೆ ಒಂದೊಂದು ಗುಂಪಿನಲ್ಲೂ 8-10 ಆನೆಗಳಿರುತ್ತವೆ. ಪ್ರತೀ 2-3 ದಿನಗಳಿಗೊಮ್ಮೆ ಗ್ರಾಮದ ಬಳಿ ಬರುವ ಆನೆಗಳು ಬೆಳೆಗಳನ್ನು ನಾಶ ಮಾಡುತ್ತವೆ. ಕೃಷಿ ಭೂಮಿಯಲ್ಲಿ ಏಲಕ್ಕಿ, ಭತ್ತ, ಬಾಳೆಹಣ್ಣು, ಹಲಸಿನಹಣ್ಣು ಹಾಗೂ ಅಡಿಕೆಯನ್ನು ಬೆಳೆದಿರುತ್ತೇವೆಂದು ತಿಳಿಸಿದ್ದಾರೆ.
ಇಲ್ಲಿರುವ 60-70 ಕುಟುಂಬಗಳು ಗನ್ ಗಳನ್ನು ಹೊಂದಿದ್ದರೂ, ವನ್ಯಜೀವಿಗಳಿಗಾಗಿ ಸರ್ಕಾರ ರೂಪಿಸಿರುವ ನಿಯಮಗಳಿಗೆ ಹೆದರು ಗುಂಡುಗಳನ್ನು ಹಾರಿಸುವುದಕ್ಕೆ ಭಯ ಪಡುತ್ತಿದ್ದಾರೆ.
2016-17 ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಜನರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ರೂ.20 ಕೋಟಿ ಹಣವನ್ನು ಮೀಸಲಿಟ್ಟಿದ್ದರು.
ಈ ಕುರಿತಂತೆ ಮಾತನಾಡಿರುವ ವನ್ಯಜೀವಿ ಮುಖ್ಯ ಮೇಲ್ವಿಚಾರಕ ಸಿ. ಜಯರಾಮ್, ಆನೆ ದಾಳಿಗಳಿಂದಾಗೂ ನೂರಾರು ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಿದೆ ಎಂದು ಹೇಳಿದ್ದಾರೆ.