ಶ್ರೀರಂಗಪಟ್ಟಣ: ಮಂಡ್ಯದ ಶ್ರೀರಂಗಪಟ್ಟಣದ ಸಿ.ಎಸ್.ಮೊಹಮದ್ ಸುಹೇಲ್ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಇವರು ದೆಹಲಿಯಲ್ಲಿ ಈಚೆಗೆ ನಡೆದ ‘ಐರಿಸ್–2107’ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು.
ಶ್ರೀರಂಗಪಟ್ಟಣದ ನಾರ್ಕಲಿ ಸಲೀಂ (ಸಲೀಂ ಪಾಷ) ಮತ್ತು ಪರ್ವೀನ್ ಸಲೀಂ ಅವರ ಪುತ್ರರಾದ ಮೊಹಮದ್ ಸುಹೇಲ್ ದೆಹಲಿ ವಿಜ್ಞಾನ ಸ್ಪರ್ಧೆಯಲ್ಲಿ ‘ಆ್ಯನ್ ಎಕನಾಮಿಕಲ್ ಅರ್ಲಿ ಡಿಟೆಂಕ್ಟಿಂಗ್ ಅಂಡ್ ಡೊಸೇಜ್ ಮಾನೇಟರಿಂಗ್ ಟೂಲ್ ಫಾರ್ ಪ್ರೊಟೀನ್, ಎನರ್ಜಿ, ಮಾಲ್ ನ್ಯೂಟ್ರಿಷಿಯನ್’ ಎನ್ನುವ ವಿಚಾರದ ಮೇಲೆ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಿದ್ದರು.