ರಾಜ್ಯ

ಹೈ-ಕರ್ನಾಟಕದಲ್ಲಿ ಬದಲಾವಣೆಯನ್ನು ನೋಡುವ ಸಲುವಾಗಿ ಕಲಂ 371(ಜೆ) ಜಾರಿಗೆ ತಂದೆವು: ಸಿಎಂ

Manjula VN
ಬೆಳಗಾವಿ: ಬದಲಾವಣೆಗಳನ್ನು ನೋಡುವ ಸಲುವಾಗಿ ಸಂವಿಧಾನದ ಕಲಂ371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. 
ವಿಧಾನಸಭೆಯಲ್ಲಿ ಗುರುವಾಯ ನಿಯಮ 69ರ ಅಡಿಯಲ್ಲಿ ಮಹದಾಯಿ, ಕಳಸಾ-ಬಂಡೂರಿ ಸೇರಿದಂತೆ ಉತ್ತರ ಕರ್ನಾಟಕ ಇತರೆ ವಿಚಾರಗಳ ಕುರಿತು ವಿಶೇಷ ಚರ್ಚೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಕಳೆದ ಬಾರಿ 2,719 ಸೀಟುಗಳನ್ನುನೀಡಲಾಗಿತ್ತು. ಈ ಬಾರಿ ಇದರ ಸಂಖ್ಯೆಯನ್ನು 3,179ಕ್ಕೆ ಹೆಚ್ಚಿಸಲಾಗಿದೆ. 2,840.ರಷ್ಟಿದ್ದ ಇಂಜಿನಿಯರಿಂಗ್ ಸೀಟುಗಳನ್ನು 6,320ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. 
ಹೈದರಾಬಾದ್ ಕರ್ನಾಟಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಕಲಂ371 ತಿದ್ದುಪಡಿಗೆ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ತಿರಸ್ಕರಿಸಿತ್ತು. ಆದರೆ, ಯುಪಿಎ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿತ್ತು. ಈ ಮೂಲಕ ಸರ್ಕಾರ ಹೈದರಾಬಾದ್ ಕರ್ನಾಟಕದ ವಿಭಾಗದ ಅಭಿವೃದ್ಧಿಗೆ ವಾರ್ಷಿಕವಾಗಿ ರೂ.1,000 ಕೋಟಿ ಖರ್ಚು ಮಾಡಲು ನಿರ್ಧರಿಸಿತ್ತು. ಇದೀಗ ಇದರ ಖರ್ಚನ್ನು ರೂ.1,500ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರ ಈಗಾಗಲೇ ರೂ.3,000ಕೋಟಿನ್ನು ಬಿಡುಗಡೆ ಮಾಡಿದೆ. 
19,000 ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗಿದ್ದು, ಇನ್ನುಳಿದ 28,000 ಹುದ್ದೆಗಳ ನೇಮಕಾತಿ ಪೂರ್ಣಗೊಳ್ಳುತ್ತಿದೆ. ಹೈದರಾಬಾದ್ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಹಳೆಯ ಮಾತು ಎಂದು ತಿಳಿಸಿದ್ದಾರೆ. 
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಮಿಷನ್ 150 ಅಲ್ಲ, ಬಿಜೆಪಿಯವರು 50 ಸೀಟುಗಳನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. 
SCROLL FOR NEXT