ಬೆಂಗಳೂರು: ಹಲಸೂರು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರ ವಿರುದ್ಧ ಸುಲಿಗೆ ಹಾಗೂ ಚಿತ್ರಹಿಂಸೆ ನೀಡಿದ ಆರೋಪದ ಕೇಳಿ ಬಂದಿದ್ದು, ಅವರ ವಿರುದ್ಧ ಉಪ ಪೊಲೀಸ್ ಆಯುಕ್ತ(ಡಿಸಿಪಿ)ರ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶಿಸಿಲಾಗಿದೆ.
ಹಲಸೂರು ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ಅವರು ತನಗೆ 15 ಲಕ್ಷ ರುಪಾಯಿ ಲಂಚಕ್ಕೆ ಒತ್ತಾಯಿಸಿದ್ದಲ್ಲದೆ, ಚಿತ್ರ ಹಿಂಸೆ ನೀಡಿರುವುದಾಗಿ ವಂಚನೆ ಪ್ರಕರಣದ ಆರೋಪ ದೂರಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಡಿಸಿಪಿ ಅಜಯ್ ಹಿಲೋರಿ ಅವರಿಗೆ ಸೂಚಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮುರಗೇಶಪಾಳ್ಯದ ಸೂಪರ್ ಮಾರ್ಕೆಟ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಿ ನಜೀರ್ ಅವರು 15 ಲಕ್ಷ ರುಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸ್ಟೋರ್ ಮಾಲೀಕ ನಾಜೀರ್ ಅವರು ಜೀವನಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕೃತ್ಯದ ಬಳಿಕ ನಜೀರ್ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಅವರು ಕೇರಳಕ್ಕೆ ವಾಪಸ್ ಬಂದಿದ್ದು ಗೊತ್ತಾಗಿ ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ಅವರು ಆರೋಪಿ ಕರೆತರಲು ಸಿಬ್ಬಂದಿಯನ್ನು ಕಳುಹಿಸಿದ್ದರು.
ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಹೇಳಿಕೆ ಪಡೆದು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹಲಸೂರು ಉಪವಿಭಾಗದ ಎಸಿಪಿ ತಂಡದ ಪೊಲೀಸರು, ಒತ್ತಾಯದಿಂದ ನನ್ನನ್ನು ನಗರಕ್ಕೆ ಕರೆತಂದಿದ್ದರು. ಬೈಯಪ್ಪನಹಳ್ಳಿ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟು, ಎಸಿಪಿ ಬಳಿ ಕರೆದೊಯ್ದಿದ್ದರು. ಈ ವೇಳೆ ಎಸಿಪಿ, ‘ನಜೀರ್ ಅವರಿಗೆ 15 ಲಕ್ಷ ರುಪಾಯಿ ವಂಚಿಸಿದ್ದಿಯಾ. ಆ ಹಣ ವಾಪಸ್ ಕೊಟ್ಟು ಸಂಧಾನ ಮಾಡಿಕೊ ಎಂದಿದ್ದರು. ಪೊಲೀಸರು ಏಕಾಏಕಿ ಮನೆಯಿಂದ ನನ್ನನ್ನು ಕರೆದುಕೊಂಡು ಬಂದಿದ್ದರಿಂದ, ಮಗಳ ಮದುವೆ ರದ್ದಾಗಿದೆ. ಎಂದು ನಜೀರ್ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲ್ಲೋರಿ ಅವರಿಗೆ ಶುಕ್ರವಾರ ದೂರು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics