ದಾವಣಗೆರೆ: ಧಾರಾವಾಹಿ ಗೀಳಿಗೆ ಪುಟ್ಟ ಬಾಲಕಿಯೊಬ್ಬಳು ಬಲಿಯಾಗಿದ್ದು, ಕನ್ನಡ ವಾಹಿನಿಯ ಧಾರಾವಾಹಿಯೊಂದರ ಪಾತ್ರದ ಅನುಕರಣೆ ಮಾಡಲು ಹೋಗಿ 7 ವರ್ಷದ ಪುಟಾಣಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದ ಧಾರಾವಾಹಿಯೊಂದನ್ನು ನೋಡಿ ಅದರಲ್ಲಿನ ಪಾತ್ರ ಬೆಂಕಿಹಚ್ಚಿಕೊಳ್ಳುವುದನ್ನು ಅನುಕರಿಸಿ ಏಳು ವರ್ಷದ ಪ್ರಾರ್ಥನಾ ಎಂಬ ಬಾಲಕಿ ಮೃತಪಟ್ಟಿದ್ದಾಳೆ.
ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಆಶ್ರಯ ಕಾಲೊನಿಯ ನಿವಾಸಿಯಾಗಳಾದ ಚೈತ್ರಾ ಮತ್ತು ಮಂಜುನಾಥ್ ದಂಪತಿಯ ಪುತ್ರಿ 7 ವರ್ಷದ ಪ್ರಾರ್ಥನಾ ಎಂಬ ಬಾಲಕಿ ಖ್ಯಾತ ಮನರಂಜನಾ ವಾಹಿನಿಯೊಂದರಲ್ಲಿ ಬರುವ ಧಾರಾವಾಹಿಯೊಂದರ ಪ್ರಭಾವಕ್ಕೆ ಒಳಗಾಗಿದ್ದಳು. ಕಳೆದ ನವೆಂಬರ್ 11ರಂದು ಬಾಲಕಿ ಆ ಧಾರಾವಾಹಿಯೊಂದರ ಪಾತ್ರದ ಅನುಕರಣೆ ಮಾಡಲು ಹೋಗಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಪ್ರಾರ್ಥನಾಳನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಪ್ರಾರ್ಥನಾ ಸಾವನ್ನಪ್ಪಿದ್ದಾಳೆ. ಪ್ರಾರ್ಥನಾ ಸ್ಥಳೀಯ ಸೇಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics