ರಾಜ್ಯ

ಚೆನ್ನೈಗೆ ಹೊಸ ರೈಲು, ಪ್ರಯಾಣದ ಅವಧಿಯಲ್ಲಿ ಕಡಿತ

Raghavendra Adiga
ಬೆಂಗಳೂರು: ಬೆಂಗಳೂರಿನ ಚೆನ್ನೈಗೆ ತೆರಳುವ ಪ್ರಯಾಣಿಕರಿಗೆ ನೈರುತ್ಯ ರೈಲ್ವೇ ವಲಯ ವಿಶೇಷ ರೈಲು ಪ್ರಾರಂಭಿಸಲಿದೆ. ಇದೇ ನಾಲ್ಕು ದಿನಗಳ ನಂತರ ಈ ನೂತನ ರೈಲು ಸೇವೆ ಲಭ್ಯವಾಗಲಿದೆ. ಉತ್ತರಪ್ರದೇಶದ ಮಾಣಿಕ್ ಪುರ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂರು ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡರು ಮತ್ತು ವಾಸ್ಕೋ ಡಾ ಗಾಮಾ ಎಕ್ಸ್ ಪ್ರೆಸ್ ನ 24 ಬೋಗಿಗಳಲ್ಲಿ 13 ಬೋಗಿಗಳು ವ್ಯಾಪಕ ಹಾನಿಗೊಳಗಾಗಿದ್ದವು. ವಾಸ್ಕೊ ರೈಲಿಗೆ ಬದಲಿ ರೈಲನ್ನು ತುರ್ತಾಗಿ ಪ್ರಾರಂಭಿಸುವ ಯೋಜನೆ ಇತ್ತು.
"ನಮ್ಮ ಮುಖ್ಯ ಶಾಖೆ(ಹುಬ್ಬಳ್ಳಿ)ಗೆ ನಮಗೆ ಶೀಘ್ರವಾಗಿ 'ಸ್ಟ್ರೆಚ್ ರೇಕ್' (ಲಭ್ಯವಿರುವ ಬಿಡಿಭಾಗಗಳನ್ನು ಬಳಸಿ ರಚಿಸಿದ ರೈಲು) ಅನ್ನು ಕಳುಹಿಸಲು ನಾವು ಕೇಳಿದ್ದೆವು, ನಿನ್ನೆ ನಾವು ಅದನ್ನು ಸ್ವೀಕರಿಸಿದ್ದೇವೆ" ಎಂದು ಬೆಂಗಳೂರು ರೈಲ್ವೆ ವಿಭಾಗದ ಉನ್ನತ ರೈಲ್ವೇ ಅಧಿಕಾರಿಯೊಬ್ಬರು ಹೇಳಿದರು. ಎಸ್ ಡಬ್ಲ್ಯೂ ಆರ್ ನ ಉಪ ವ್ಯವಸ್ಥಾಪಕ ಕಾರ್ಯದರ್ಶಿ ಇ.ವಿಜಯಾ ಸ್ಪಷ್ಟಪಡಿಸಿದ್ದಾರೆ
ಭಾರೀ ಮಂಜಿನಿಂದಾಗಿ ಕರ್ನಾಟಕ ಎಕ್ಸ್ ಪ್ರೆಸ್ ಚಳಿಗಾಲದಲ್ಲಿ ತಡವಾಗಿ ಚಲಿಸುತ್ತಿದೆ. ಇದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತಲುಪಿದ ನಂತರ ಚೆನೈ ಮೇಲ್ ಆಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ, ಚೆನ್ನೈ ರೈಲಿನಲ್ಲಿ ಪ್ರಯಾಣಿಸುವವರು ಕರ್ನಾಟಕ ಎಕ್ಸ್ ಪ್ರೆಸ್ ಮೇಲೆ ಅವಲಂಬಿಸುವುದನ್ನು ತಪ್ಪಿಸಲು ನಾವು ವಿಶೇಷ ರೈಲು ಪ್ರಾರಂಭಿಸಲಿದ್ದೇವೆ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ "ಕರ್ನಾಟಕ ಎಕ್ಸ್ ಪ್ರೆಸ್ ಬುಧವಾರ ಸ್ವಲ್ಪ ವಿಳಂಬವಾಗಿದ್ದರಿಂದ, ಚೆನ್ನೈ ಮೇಲ್ ಗೆ ಬದಲಾಗಿತ್ತು, ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ಅಡಚಣೆಯಾಗಿಲ್ಲ" ಅವರು ಹೇಳಿದರು.
SCROLL FOR NEXT