ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)
ಬೆಂಗಳೂರು: ಬೆಂಗಳೂರಿಗರೆ, ದಯಾವಿತ್ತು ಗಮನಿಸಿ, ನ.1 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರಸಾರವಾಗುವ ಪ್ರಕಟಣೆಗಳು ಕನ್ನಡದಲ್ಲಿರಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆ.ಡಿ.ಎ) ಕೆಐಎ ಮತ್ತು ಖಾಸಗಿ ವಿಮಾನ ಆಪರೇಟರ್ಗಳು ಕೆಐಎ ನಲ್ಲಿ ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಕನ್ನಡವನ್ನು ಬಳಸಿಕೊಳ್ಳಬೇಕೆಂದು ಒತ್ತಾತಿಸಿದೆ.
ಕೆಡಿಎ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಮತ್ತು ಇತರೆ ಅಧಿಕಾರಿಗಳು ನಿನ್ನೆ ಕೆಐಎಗೆ ಭೇಟಿ ನೀಡಿ ಕೆಐಎಎ ನಲ್ಲಿ ಕನ್ನಡ ಭಾಷೆ ಬಳಕೆ ಕುರಿತು ಪರಿಶೀಲನೆ ನಡೆಸಿದರು. ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ಅವರು, ತಮ್ಮ ಒತ್ತಾಯದ ನಂತರ, ಕನ್ನಡದಲ್ಲಿ ಸಹ ವಿಮಾನ ಸಂಚಾರ ವಿವರವನ್ನು ಪ್ರಕಟಿಸಲು ಕೆಐಎ ಅಧಿಕಾರಿಗಳು ಒಪ್ಪಿದ್ದಾರೆ ಎಂದರು."ನಾವು ಈಗ ಕೆಐಎ ಮತ್ತು ಖಾಸಗಿ ಆಪರೇಟರ್ ಗಳಿಗೆ ಕನ್ನದದಲ್ಲಿಯೂ ವಿಮಾನ ಸಂಚಾರ ಕುರಿತ ಪ್ರಕಟಣೆಗಳನ್ನು ನೀದಬೇಕೆಂದು ಒತ್ತಾಯಿಸಿದ್ದೇವೆ. ಅವರು ಅದನ್ನು ನ.1 ರಿಂದ ಜಾರಿಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ '' ಎಂದು ಅವರು ಹೇಳಿದರು.
ಇದಲ್ಲದೆ, ಅವರು ವಿಮಾನದೊಳಗೆ ಮತ್ತು ಕಾಫಿ ಶಾಪ್ ಗಲಲ್ಲಿ ಇತರ ಭಾಷೆಗಳೊಂದಿಗೆ ಕನ್ನಡ ಮೆನು ಕಾರ್ಡನ್ನು ಸೇರಿಸಬೇಕೆಂದು ಹೇಳಿದರು. ಕೆಡಿಎ ಅಧ್ಯಕ್ಷರ ಪ್ರಕಾರ, ಬೆಂಗಳೂರಿಗೆ ಬರುವ ವಿದೇಶಿ ಪ್ರಜೆಗಳನ್ನೂ ಒಳಗೊಂಡಂತೆ ಇತರೆ ರಾಜ್ಯದವರಿಗೆ ಕನ್ನಡವನ್ನು ಪರಿಚಯಿಸಬೇಕು. ಓದುವುದಕ್ಕೆ ಆಗದಿದ್ದರೂ ಅಕ್ಷರ ವಿನ್ಯಾಸದ ಕುರಿತಾದರೂ ಅವರು ತಿಳಿಯುವಂತಾಗಬೇಕು. "ಕೆಐಎ ಆವರಣದಲ್ಲಿ ಅಂಗಡಿಗಳು ಮತ್ತು ಹೋಟೆಲ್ ಗಳು ತಮ್ಮ ಬೋರ್ಡ್ ಮತ್ತು ಕಾರ್ಡುಗಳಲ್ಲಿ ಕನ್ನಡವನ್ನು ಸಹ ಹೊಂದಿರಬೇಕು" ಅವರು ಹೇಳಿದರು. ಕೆಡಿಎ ಯು 200 ಪುಸ್ತಕಗಳನ್ನು ಕೆಐಎ ಅಧಿಕಾರಿಗಳಿಗೆ ಮತ್ತು ಖಾಸಗಿ ವಿಮಾನ ಸಿಬ್ಬಂದಿಗೆ ನೀಡುತ್ತಿದೆ.