ರಾಜ್ಯ

ಕೊಲೆ ಆರೋಪ: ದಂಡುಪಾಳ್ಯ ಹಂತಕರಿಗೆ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದ ಹೈ ಕೋರ್ಟ್

Raghavendra Adiga
ಬೆಂಗಳೂರು: ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಮೂವರಿಗೆ ಹೈಕೋರ್ಟ್ ನಿನ್ನೆ  0 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಮತ್ತು ಇನ್ನೋರ್ವ ಆರೋಪಿ ವಿರುದ್ಧ ದರೋಡೆ, ಕೊಲೆಗೆ  ಸಹಾಯಕನಾಗಿದ್ದನೆನ್ನಲು ಸಾಕ್ಷಾಧಾರಗಳಿಲ್ಲ ಎಂದು ನಿರ್ಣಯಿಸಿದೆ. ಕೋರ್ಟ್ ಮೂವರಿಗೆ 10 ವರ್ಷಗಳ ಕಠಿಣ ಸೆರೆವಾಸ ವಿಧಿಸಿದೆ ಮತ್ತು ದರೋಡೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ 10,000 ರೂ. ದಂಡ ವಿಧಿಸಿದೆ.
ನಗರದ ಮಾಗಡಿ ರಸ್ತೆಯ ಸುಧಾಮಣಿ ಎಂಬುವರ ಕೊಲೆ ಮತ್ತು ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಈ ತೀರ್ಪು ನೀಡಿದೆ.
ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ ಮತ್ತು ನಲ್ಲತಿಮ್ಮ ಅಲಿಯಾಸ್ ತಿಮ್ಮ ಎಂಬ ಮೂವರು ಆರೋಪಿಗಳು ಕಠಿಣ ಸೆರೆವಾಸ ಶಿಕ್ಷೆಗೆ ಗುರಿಯಾಗಿದ್ದಾರೆ. ನಾಲ್ಕನೇ ಆರೋಪಿಯಾದ ಲಕ್ಷ್ಮಮ್ಮನ ಕುರಿತು ಕೋರ್ಟ್ ಸಾಕ್ಷಾಧಾರ ಸಿಗದ ಹಿನ್ನೆಲೆಯಲ್ಲಿ ಖುಲಾಸೆ ಮಾಡಲಾಗಿದೆ.
ನ್ಯಾಯಮೂರ್ತಿ ರವಿ ಮಳಿಮಠ್ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರನ್ನೊಳಗೊಂದ ಪೀಠವು ಈ ತೀರ್ಪು ಪ್ರಕಟಿಸಿದೆ. ಅಪರಾಧಿಗಳು ಇದಾಗಲೇ ಬೆಲಗಾವಿ ಹಿಂದಲಗಾ ಜೈಲಿನಲ್ಲಿದ್ದು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ನ್ಯಾಯಾಲಯ ತೀರ್ಪಿನ ವಿರುದ್ಧ ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 2010ರಲ್ಲಿ ವಿಶೇಷ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಆದರೆ ಹೈ ಕೋರ್ಟ್ ಆರೋಪಿಗಳ ವಿರುದ್ಧ ನಂಬಲರ್ಹ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ಹಾಜರುಪಡಿವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎನ್ನುವ ಮೂಲಕ ಮರಣದಂಡನೆ ಯನ್ನು ರದ್ದುಗೊಳಿಸಿತ್ತು.
SCROLL FOR NEXT