ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹೊಸ ಐಪಿಎಸ್ ಅಧಿಕಾರಿಯನ್ನು ನೇಮಿಸುವ ಸಾಧ್ಯತೆಯಿದೆ.
ಮೈಸೂರು ಮೂಲದ ಹೆಚ್.ಸಿ. ಕಿಶೋರ್ ಚಂದ್ರ ಅವರು ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1984 ಬ್ಯಾಚ್ನ ಐಪಿಎಸ್ ಅಧಿಕಾರಿ. ಎಂಎ, ಸ್ನಾತಕೋತ್ತರ ಕಾನೂನು ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ. ಸದ್ಯ ಈ ಡಿಜಿಪಿ ಹಾಗೂ ಐಜಿ ಯಾಗಿರುವ ಆರ್.ಕೆ. ದತ್ತಾ ಅವರ ಅಧಿಕಾರ ಅಕ್ಟೋಬರ್ 31ರಂದು ಅಂತ್ಯಗೊಳ್ಳಲಿದೆ.
ಡಿಜಿಪಿ ರೇಸ್ನಲ್ಲಿ ಕಿಶೋರ್ ಚಂದ್ರ, ಎಂ.ಎನ್. ರೆಡ್ಡಿ, ನೀಲಮಣಿ ರಾಜು ಇದ್ದರೂ. ಸಂಪುಟ ಸಭೆಯಲ್ಲಿ ಕೂಡ ಡಿಜಿಪಿ ಆಯ್ಕೆ ಕುರಿತು ಚರ್ಚೆ ನಡೆದಿದೆ. ಆ ಸಮಯದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ, ಟಿ.ಬಿ ಜಯಚಂದ್ರ ಸೇರಿದಂತೆ ಎಲ್ಲ ಒಕ್ಕಲಿಗ ಸಚಿವರು ಹೆಚ್.ಸಿ.ಕಿಶೋರ್ ಚಂದ್ರ ಅವರನ್ನು ನೇಮಕ ಮಾಡಲು ಬೆಂಬಲ ಸೂಚಿಸಿದ್ದರು ಎಂದು ತಿಳಿದು ಬಂದಿದೆ.