ಬೆಂಗಳೂರು: ಕರ್ನಾಟಕದ ಎಲ್ಲಾ 6,092 ಗ್ರಾಮ ಪಂಚಾಯತ್ ಗಳಿಗೆ 100 ಎಂಬಿಪಿಎಸ್ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸಂಪರ್ಕವನ್ನು ನೀದಲಾಗುವುದು ಎಂದು ಟೆಲಿಕಾಂ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ಅರುಣಾ ಸುಂದರಾಜನ್ ತಿಳಿಸಿದ್ದಾರೆ.
ಪ್ರಸ್ತುತ, 643 ಗ್ರಾಮಗಳು ವೈ ಫೈ ಸಂಪರ್ಕವನ್ನು ಹೊಂದಿವೆ, ಅಲ್ಲಿ ಪ್ರತಿ ಬಳಕೆದಾರರಿಗೆ ದಿನಕ್ಕೆ 100 ಎಂಬಿಪಿಎಸ್ ವರೆಗೆ ಉಚಿತ ಇಂಟರ್ನೆಟ್ ಬಳಸಬಹುದಾಗಿದೆ. ಬರುವ ನವೆಂಬರ್ ಒಳಗೆ ಎಲ್ಲಾ ಗ್ರಾಮ ಪಂಚಾಯತ್ ಗಳಿಗೂ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗುತ್ತದೆ.
"ಉಳಿದ ರಾಜ್ಯಗಳಿಗೆ ಕರ್ನಾಟಕವು ಒಂದು ಮಾದರಿಯಾಗಿ ಪರಿವರ್ತನೆ ಆಗಬಹುದು. ಇಲ್ಲಿ ಪ್ರತಿ ಬಳಕೆದಾರರು ದಿನಕ್ಕೆ 700-800 ಎಂಬಿ ಡೇಟಾ ಬಳಸುತ್ತಾರೆ. ರಾಜ್ಯದಲ್ಲಿ 8,000 ನಗರಗಳಿವೆ ಮತ್ತು 5,000 ನಗರಗಳಲ್ಲಿ ಗಳನ್ನು 3ಜಿ ಸೌಲಭ್ಯವಿದೆ. 4ಜಿ ಗಾಗಿ ಹೆಚ್ಚು ಬೇಡಿಕೆ ಇದೆ. ರಾಜ್ಯದ ಖಾಸಗಿ ಡೇಟಾ ಪೂರೈಕೆದಾರರಲ್ಲಿ ಉತ್ತಮ ಸ್ಪರ್ಧೆ ಇದೆ"ಎಂದು ಅರುಣಾ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಪ್ರಸ್ತುತ 3,800 ಗ್ರಾಮ ಪಂಚಾಯತ್ ಗಳು ಈಗಆಸ್ತಿತ್ವದಲ್ಲಿರುವ ಭಾರತ್ ನೆಟ್ ಸೇವೆಯನ್ನು ವಿವಿಧ ಯೋಜನೆಗಳಿಗೆ ಮತ್ತು ಸರ್ಕಾರಿ, ನಾಗರಿಕ ಸೇವೆಗಳಿಗೆ ಬಳಸುತ್ತಿದ್ದಾರೆ. ಭಾರತ್ ನೆಟ್ 2.5 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಒದಗಿಸಲು ಹೊಸ ಬ್ರಾಂಡ್ ನೇಮ್ 'ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ' (ಎನ್ಒಎಫ್ಎನ್) ನೊಂದಿಗೆ ಅಕ್ಟೋಬರ್ 2011 ರಲ್ಲಿ ಪ್ರಾರಂಭವಾಯಿತು.
ಭಾರತ್ ನೆಟ್ ಮೈಸೂರು ಜಿಲ್ಲೆಯ 206 ಗ್ರಾಮ ಪಂಚಾಯತ್ ಗಳಲ್ಲಿ ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್ ವರ್ಕ್ ಗೆ ಬೆಂಬಲ ನೀಡುತ್ತದೆ. ವೈಫೈ ಅನ್ನು 4,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಕ್ರಿಯಗೊಳಿಸಲು ಇದೀಗ ಪ್ರಸ್ತಾಪಿಸಿದೆ. ಟೆಲಿಕಾಂ ಇಲಾಖೆ, ಟೆಲಿಕಾಂ ಸೇವೆ ಒದಗಿಸುವವರು ಮತ್ತು ಇಂಟರ್ನೆಟ್ ಸೇವೆ ಒದಗಿಸುವವರು ಸೇವೆಗಳನ್ನು ಒದಗಿಸಲು ಭಾರತ್ ನೆಟ್ ವರ್ಕ್ ನ್ನು ಆಯ್ದುಕೊಳ್ಳುವಂತೆ ಹೇಳಿದೆ.
ಕರ್ನಾಟಕದಲ್ಲಿ ಶೇ. 99 ಗ್ರಾಮ ಪಂಚಾಯತ್ ಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕ ಇದೆ. ಶೇ.93.2 ರಷ್ಟು ಹೆಚ್ಚಿನ ವೇಗದ ಇಂತರ್ ನೆಟ್ ಗಾಗಿ ಬೇಡಿಕೆ ಇದೆ. ಭಾರತ್ ನೆಟ್ ಅನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ 20,000 ಫೈಬರ್ ಸಂಪರ್ಕಗಳನ್ನು ಒದಗಿಸುವ ಯೋಜನೆಗಳನ್ನು ಬಿಎಸ್ಎನ್ಎಲ್ ಹೊಂದಿದೆ.
ಅವರು 346 ಉತ್ಕೃಷ್ಟ ವೇಗದ ಬ್ರಾಡ್ಬ್ಯಾಂಡ್ ಸಂಪರ್ಕಗಳನ್ನು ಒದಗಿಸಲಿದ್ದಾರೆ. ರಾಜ್ಯ ಸರ್ಕಾರದ ಬೆಂಬಲದೊಂದಿಗೆ 2,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವೈಫೈ ಸಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.