ರಾಜ್ಯ

ಹೊರನಾಡು ದೇವಾಲಯ ಧರ್ಮಕರ್ತರ ಡೆಬಿಟ್ ಕಾರ್ಡ್ ಹ್ಯಾಕ್: 21 ಲಕ್ಷ ಕಳವು

Raghavendra Adiga
ಚಿಕ್ಕಮಗಳೂರು: ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಚೋಶಿ ಅವರ ಡೆಬಿಟ್ ಕಾರ್ಡ್ ಹ್ಯಾಕ್ ಆಗಿದೆ! ಕಾರ್ಡ್ ಹ್ಯಾಕ್  ಮಾಡಿರುವ ವಂಚಕರು 21 ಲಕ್ಷ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
ಭೀಮೇಶ್ವರ ಚೋಶಿ ಯುರೋಪ್ ಪ್ರವಾಸದಲ್ಲಿದ್ದಾಗ ಸೆ.4ರಂದು ಇವರದೇ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ದರು. ಅಂದಿನ ಬ್ಯಾಲೆನ್ಸ್ 25 ಲಕ್ಷ ರೂ. ಗಳಿತ್ತು. ಸೆ.6ರಂದು ಭಾರತಕ್ಕೆ ವಾಪಸದಾಗಿದ್ದ ಚೋಶಿ ಸೆ.14ರಂದು ತಮ್ಮ ಖಾತೆ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬಯಲಾಗಿದೆ.
ಸೆ.4ರಿಂದ 13ರವರೆಗೆ ಹಲವು ಬಾರಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಕಳಸದ ಕರ್ನಾಟಕ ಬ್ಯಾಂಕ್‍ನಿಂದ 21 ಲಕ್ಷ ರೂ. ಎಗರಿಸಿದ್ದಾರೆ.
ಹಣ ಕಡಿತವಾದ ಸಂದೇಶ ಇವರ ಮೊಬೈಲ್‍ಗೆ ಬದಿದ್ದರೂ ಅದನ್ನು ಗಮನಿಸಿದೆ ಇದ್ದದ್ದು ಇಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. 
ಸೆ.14ರಂದು ವಿಷಯ ತಿಳಿದ ಕೂಡಲೇ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.  ಐಟಿ ಕಾಯ್ದೆ 66ಡಿ ಮತ್ತು ಐಪಿಸಿ 420 ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರು ಸೈಬರ್ ವಿಭಾಗಕ್ಕೆ ವರ್ಗಾಹಿಸಲಾಗುವುದು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.
SCROLL FOR NEXT