ಐಐಎಸ್ ಸಿ, ಬೆಂಗಳೂರು 
ರಾಜ್ಯ

ಐಐಎಸ್ ಸಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ, ಸೆಕ್ಯೂರಿಟಿ ಗಾರ್ಡ್ ಬಂಧನ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸಂಸ್ಥೆಯ ಭದ್ರತಾ ಸಿಬ್ಬಂದಿ ಗೌತಮ್‌ ರಾಜ್‌ ಎನ್ನುವವನನ್ನು ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸಂಸ್ಥೆಯ ಭದ್ರತಾ ಸಿಬ್ಬಂದಿ ಗೌತಮ್‌ ರಾಜ್‌ ಎನ್ನುವವನನ್ನು ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ.
"ಸಂಸ್ಥೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ವಿದ್ಯಾರ್ಥಿನಿ ಸೆ.14ರಂದು ಗ್ರಂಥಾಲಯಕ್ಕೆ ಹೋಗಿದ್ದ ವೇಳೆ ಆರೋಪಿಯು ಈ ಕೃತ್ಯ ಎಸಗಿದ್ದಾನೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ" ಎಂದು ಪೊಲೀಸರು ತಿಳಿಸಿದರು.
"ವಿದ್ಯಾರ್ಥಿನಿಯು ಮಧ್ಯಾಹ್ನ 12.20ರ ಸುಮಾರಿಗೆ ಗ್ರಂಥಾಲಯದಲ್ಲಿ ಓದುತ್ತಾ ಕುಳಿತಿದ್ದರು. ಅಲ್ಲಿಗೆ ಬಂದಿದ್ದ ಆರೋಪಿ ನಿಮ್ಮೊದನೆ ಮಾತನಾದಬೇಕು, ಹೊರಗೆ ಬನ್ನಿ ಎಂದು ಕರೆದಿದ್ದ. ಆಗ ಯುವತಿ ಆತನೊಂದಿಗೆ ಹೊರಗೆ ಬಂದಿದ್ದಾಳೆ. ಈ ವೇಳೆ ಯುವತಿಯ ಕೈ ಹಿಡಿದು ಎಳೆದಾಡಿದ್ದ ಆರೋಪಿ, ಮುತ್ತು ಕೊಡುವಂತೆ ಒತ್ತಾಯಿಸಿದ್ದ. ಗಾಬರಿಗೊಂಡ ಯುವತಿ ಆತನನ್ನು ತಳ್ಳಿ ತಪ್ಪಿಸಿಕೊಂಡಿದ್ದಳು. ನಂತರ ಹಾಸ್ಟೆಲ್‌ ಗೆ ಹೋಗಿ ಸಹಪಾಠಿಗಳಿಗೆ ವಿಷಯ ತಿಳಿಸಿದ್ದಳು" ಎಂದು ಪೊಲೀಸರು ವಿವರಿಸಿದರು.
ಘಟನೆಯ ಮಾಹಿತಿ ಪಡೆದುಕೊಂಡ ಯುವತಿಯ ಸೋದರ ಹಾಗೂ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಪ್ರಕರಣ ದಾಕಲಿಸಿಕೊಂಡ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಐಐಎಸ್ ಸಿ ಯ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಸದಸ್ಯರು ಪ್ರಕರಣ ಸಂಬಂಧ ವಿದ್ಯಾರ್ಥಿನಿಯ ಹೇಳಿಕೆ ಪಡೆದು ಪ್ರತ್ಯೇಕ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

SCROLL FOR NEXT