ಗದಗ: ತನ್ನ ಐದು ತಿಂಗಳ ಮಗುವಿಗೆ ನೇಣು ಬಿಗಿದ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ನಿವಾಸಿ ಶೃತಿ ಗೋವಿಂದಗೌಡ ಹಿರೇಗೌಡರ ತನ್ನ ಮಗುವಿನೊಡನೆ ನೇಣಿಗೆ ಶರಣಾದ ಮಹಿಳೆಯಾಗಿದ್ದು ಬುಧವಾರ ರಾತ್ರಿ ಮನೆಯಲ್ಲಾರೂ ಇಲ್ಲದ ವೇಳೆ ತನ್ನ ಮಗುವಿಗೆ ನೇಣು ಹಾಕಿ ನಂತರ ತಾನೂ ಸಾವನ್ನಪ್ಪಿದ್ದಾಳೆ.
ಪತಿಯ ಕಿರುಕುಳ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶೃತಿಯ ಪೋಷಕರು ಆರೋಪಿಸಿದ್ದಾರೆ.
ಶೃತಿ ಸವದತ್ತಿ ತಾಲೂಕಿನ ಉಗರಗೋಳ ನಿವಾಸಿ ಗೋವಿಂದಗೌಡ ಹಿರೇಗೌಡ ಎನ್ನುವವರನ್ನು ವಿವಾಹವಾಗಿದ್ದರು. ಆದರೆ ಗೋವಿಂದಗೌಡ ಬೇರೆಯವರ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಈ ಸಂಬಂಧ ಪತಿ ಪತ್ನಿಯರ ನಡುವೆ ಆಗಾಗ ಜಗಳವಾಗುತ್ತಿತ್ತು. ಕಡೆಗೆ ಶೃತಿ ಗಂಡನ ಮನೆ ತೊರೆದು ತನ್ನತವರಾದ ಶ್ಯಾಗೋಟಿಗೆ ಬಂದಿದ್ದರು.
ಬುಧವಾರ ಶೃತಿ ತನ್ನ ತವರು ಮನೆಯಲ್ಲಿದ್ದು ಗಂಡನ ಕಿರುಕುಳದ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಗದಗ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics