ಕರ್ನಾಟಕ ಹೈಕೋರ್ಟ್ 
ರಾಜ್ಯ

ಹಳ್ಳಿಯಲ್ಲಿ ವಾಸವಾಗಿದ್ದಾಳೆಂಬ ಕಾರಣಕ್ಕೆ ಪತ್ನಿಯ ನಿರ್ವಹಣೆ ವೆಚ್ಚ ಕಡಿಮೆ ಮಾಡಲಾಗದು: ಹೈಕೋರ್ಟ್

ಪತ್ನಿ ಹಳ್ಳಿಯಲ್ಲಿ ವಾಸಿಸುತ್ತಿದ್ದಾಳೆ ಎಂಬ ಮಾತ್ರಕ್ಕೆ 25,000 ರೂಪಾಯಿ ಮಧ್ಯಂತರ ನಿರ್ವಹಣೆ ....

ಬೆಂಗಳೂರು: ಪತ್ನಿ ಹಳ್ಳಿಯಲ್ಲಿ ವಾಸಿಸುತ್ತಿದ್ದಾಳೆ ಎಂಬ ಮಾತ್ರಕ್ಕೆ 25,000 ರೂಪಾಯಿ ಮಧ್ಯಂತರ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳು ನೀಡಬೇಕಾಗಿಲ್ಲ ಎಂಬ ಅರ್ಥವಲ್ಲ. ನಾಲ್ಕನೇ ವರ್ಗದ ನೌಕರರು ಕೂಡ ತಿಂಗಳಿಗೆ 25,000 ರೂಪಾಯಿಗಳಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಪತ್ನಿಗೆ ತಿಂಗಳಿಗೆ 25,000 ರೂಪಾಯಿ ನಿರ್ವಹಣೆ ವೆಚ್ಚ ನೀಡುವುದು ನ್ಯಾಯಯುತ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

32 ವರ್ಷದ ಉದ್ಯಮಿ ಸೌರಭ್(ಹೆಸರು ಬದಲಿಸಲಾಗಿದೆ) ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿಗೆ ವಿರುದ್ಧವಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಕೌಟುಂಬಿಕ ನ್ಯಾಯಾಲಯ ಅವರ ಪತ್ನಿ ರಾಜಸ್ತಾನದ ಹನುಮಂಗರ್ ನಲ್ಲಿ ವಾಸಿಸುತ್ತಿರುವ 32 ವರ್ಷದ ಪತ್ನಿ ವನಿತಾಗೆ ಕಾನೂನು ವ್ಯಾಜ್ಯ ವೆಚ್ಚ ಸೇರಿದಂತೆ ಮಧ್ಯಂತರ ನಿರ್ವಹಣೆ ವೆಚ್ಚ 25,000 ರೂಪಾಯಿ ನೀಡಬೇಕೆಂದು ಆದೇಶ ನೀಡಿತ್ತು.

ತನ್ನ ಪತಿ ಉದ್ಯಮಿಯಾದರೂ ಕೂಡ ಅವರ ಆದಾಯದ ಬಗ್ಗೆ ಯಾವುದೇ ಸಾಕ್ಷಿಗಳನ್ನು ಒದಗಿಸಿರಲಿಲ್ಲ. ಮಧ್ಯಂತರ ನಿರ್ವಹಣೆ ವೆಚ್ಚ ತಿಂಗಳಿಗೆ 25,000 ರೂಪಾಯಿ ನೀಡಬೇಕೆಂದು ಹೇಳಿ ಕೌಟುಂಬಿಕ ನ್ಯಾಯಾಲಯ ಸೌರಭ್ ಗೆ ಅನ್ಯಾಯ ಮಾಡಿದೆ ಎಂದು ಸೌರಭ್ ಪರ ವಕೀಲ ಹೈಕೋರ್ಟ್ ನಲ್ಲಿ ವಾದಿಸಿದ್ದರು. ವನಿತಾ ಹಳ್ಳಿಯಲ್ಲಿ ವಾಸಿಸುತ್ತಿರುವುದರಿಂದ ತಿಂಗಳಿಗೆ ನಿರ್ವಹಣೆ ವೆಚ್ಚ 25,000 ರೂಪಾಯಿ ಅಧಿಕವಾಗಿದೆ. ಹೀಗಾಗಿ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಬೇಕೆಂದು ಸೌರಭ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಸಂದರ್ಭದಲ್ಲಿ ತನ್ನ ಪತಿಯಿಂದ ತಿಂಗಳಿಗೆ 75,000ರೂಪಾಯಿ ನಿರ್ವಹಣೆ ವೆಚ್ಚವನ್ನು ಕೊಡಿಸಬೇಕೆಂದು ವನಿತಾ ಅರ್ಜಿ ಸಲ್ಲಿಸಿದ್ದರು.

ವಿಚ್ಛೇದನದ ನಂತರ ಮಹಿಳೆ ತನ್ನ ಜೀವನವನ್ನು ತಾನೇ ನಿರ್ವಹಿಸಬೇಕಾಗುತ್ತದೆ. ಉದ್ಯಮಿಯನ್ನು ಮದುವೆಯಾಗಿ ನಡೆಸಿದ ಜೀವನಶೈಲಿಗೆ ತಕ್ಕಂತೆ ಜೀವನ ಮಾಡಬೇಕೆಂಬ ಆಸೆ ಆಕೆಯಲ್ಲಿರುತ್ತದೆ. ಪತಿಗೆ ವಿಚ್ಛೇದನ ನೀಡಿದ್ದಾಳೆಂದ ಮಾತ್ರಕ್ಕೆ ಆಕೆಯ ಆತ್ಮಗೌರವ ಕಡಿಮೆಯಾಗುವುದಿಲ್ಲ. ಹೀಗಾಗಿ  ಈ ನ್ಯಾಯಾಲಯವು ಅನ್ಯಾಯಕ್ಕೊಳಗಾದ ಕ್ರಮದಲ್ಲಿ ಯಾವುದೇ ಅಕ್ರಮ ಅಥವಾ ವಿಪರೀತತೆಯನ್ನು ಕಂಡುಹಿಡಿಯುವುದಿಲ್ಲ, ಈ ಅರ್ಜಿ, ಯಾವುದೇ ಅರ್ಹತೆ ಇಲ್ಲದಿರುವುದರಿಂದಅದನ್ನು ವಜಾ ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT