ಮೈಸೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಹಿತಿಯಡಿ ಚುನವಣಾಧಿಕಾರಿಗಳು ಮೈಸೂರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಸುಮಾರು 8 ಕೋಟಿ ರು ಮೌಲ್ಯದ ನಗದು ಮತ್ತು ಸರಕುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಚುನಾವಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಸರಕು ಸಾಮಾನುಗಳು, ಸಾರಾಯಿ ಹಣವನ್ನು ವಿವಿಧ ಚೆಕ್ ಪೊಸ್ಟ್ ಗಳಲ್ಲಿ ವಶಪಡಿಸಿಕೊಂಡಿದ್ದಾರೆ.
ದಿನದ 24 ಗಂಟೆಗಳಲ್ಲೂ ವಾಹನಗಳನ್ನು ಪರಿಶೀಲಿಸುತ್ತಿರುತ್ತೇವೆ, ಇದುವರೆಗೂ 1 ಕೆಜಿ ಚಿನ್ನ, 7.48 ಲಕ್ಷ ರು ನಗದು, 2,33 ಲಕ್ಷ ಮೌಲ್ಯದ ಮದ್ಯ, 7 ವಾಹನಸ ಹಾಗೂ 2 ಸಾವಿರ ಪೋಸ್ಟರ್, ಹಾಟ್ ಬಾಕ್ಸ್ ಹಾಗೂ ನೀರಿನ ಬಾಟಲ್ ಗಳನ್ನು ವಶ ಪಡಿಸಿಕೊಂಡಿರುವುದಾಗಿ ಡೆಪ್ಯೂಟಿ ಕಮಿಷನರ್ ಕೆಬಿ ಶಿವಕುಮಾರ್ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಳಂಘನೆ ಸಂಬಂಧ 198 ಕೇಸ್ ದಾಖಲಿಸಿದ್ದು, 71 ಕೇಸುಗಳನ್ನು ಕ್ಲೋಸ್ ಮಾಡಲಾಗಿದೆ. 49 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, 93 ಫ್ಲೈಯಿಂಗ್ ಸ್ಕ್ವಾಡ್ ಕೆಲಸ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ,
ಚೆಕ್ ಪೋಸ್ಟ್ ಗಳಲ್ಲಿ ಕೆಲ ವಾಹನ ತಡೆ ಹಿಡಿಯುತ್ತೇವೆ, ಆದರೆ ಯಾವುದೇ ಕಾರಣಕ್ಕೂ ಹೆಚ್ಚಿನ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ, ಪೊಲೀಸರನ್ನು ಹೊರತು ಪಡಿಸಿ 18 ಸಾವಿರ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ, 7 ಅರೆಸೇನಾ ಪಡೆ ಬಂದಿಳಿದಿದ್ದು, ಜಿಲ್ಲೆಯಲ್ಲಿ ಶಾಂತಿಯು ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ.