ರಾಜ್ಯ

ಕತುವಾ, ಉನ್ನಾವೊ ಅತ್ಯಾಚಾರ ಪ್ರಕರಣ: ಬೆಂಗಳೂರಿಗರ ಮೌನ ಪ್ರತಿಭಟನೆ

Sumana Upadhyaya

ಬೆಂಗಳೂರು: ಕತುವಾ ಮತ್ತು ಉನ್ನಾವೊದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರದಾದ್ಯಂತ ನಿನ್ನೆ ಮೌನ ಪ್ರತಿಭಟನೆ ನಡೆಸಲಾಯಿತು. ಭಾರತೀಯ ವೈಜ್ಞಾನಿಕ ಸಂಸ್ಥೆಯಲ್ಲಿ ಹಲವು ವಿದ್ಯಾರ್ಥಿಗಳು, ಕಚೇರಿ ಸಿಬ್ಬಂದಿಗಳು, ಕುಟುಂಬಿಕರು ಸೇರಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಕೋರಮಂಗಲ, ಸಿದ್ದಾಪುರ, ವೈಟ್ ಫೀಲ್ಡ್, ಕಮ್ಮನಹಳ್ಳಿ, ರಿಚರ್ಡ್ಸ್ ಪಾರ್ಕ್, ಬೆನ್ಸನ್ ಟೌನ್ ಮತ್ತು ಕೂಕ್ಸ್ ಟೌನ್ ಸುತ್ತಮುತ್ತಲ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ದೇಶಾದ್ಯಂತ ಅಪ್ರಾಪ್ತ ಬಾಲಕಿಯರು ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆಯುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಜನರು ಮೌನ ಪ್ರತಿಭಟನೆ,ಮೋಂಬತ್ತಿ ಮೆರವಣಿಗೆ, ಭಿತ್ತಿಪತ್ರಗಳ ಪ್ರದರ್ಶನಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು. ನಿಮಗೆ ಧರ್ಮದ ಬಗ್ಗೆ ಮಾತನಾಡುವ ಧೈರ್ಯವಿಲ್ಲ, ಮಕ್ಕಳ ಮೇಲೆ ಅತ್ಯಾಚಾರ ನಡೆದ ಸ್ಥಳದಲ್ಲಿ ದೇವರಿಲ್ಲ, ಬಾಲಕಿಯನ್ನು ದೇವಸ್ಥಾನದಲ್ಲಿ ಆಕೆಯ ದೇವರಾಗಲಿ, ನಿಮ್ಮ ದೇವರಾಗಲಿ ರಕ್ಷಿಸಲಿಲ್ಲ ಮೊದಲಾದ ಘೋಷಣೆಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

SCROLL FOR NEXT