ಬೆಂಗಳೂರು: ನಮ್ಮ ಮೆಟ್ರೋ ಮುಷ್ಕರಕ್ಕೆ ಹೈಕೋರ್ಟ್ ತಡೆ
ಬೆಂಗಳೂರು: ಮುಂದಿನ ವಿಚಾರಣೆ ವರೆಗೂ ನಮ್ಮ ಮೆಟ್ರೋ ನೌಕರರು ಮುಷ್ಕರ ನಡೆಸಬಾರದೆಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ನಿಡಿದೆ. ಇದರಿಂದಾಗಿ ಮೆಟ್ರೋ ನೌಕರರ ಸಂಘ ನಾಳೆಯಿಂದ ಕರೆ ನಿಡಿದ್ದ ಅನಿರ್ಧಿಷ್ಠಾವಧಿ ಮುಷ್ಕರ ರದ್ದಾಗಿದೆ.
ಹೈಕೋರ್ಟ್ ಆದೇಶ ಪಾಲನೆಗೆ ಒಪ್ಪಿರುವ ಮೆಟ್ರೋ ನೌಕರರ ಸಂಘವು ಬಿಎಂಆರ್ಸಿಎಲ್ ಗೆ ನಿಡಿದ್ದ ನೋಟೀಸ್ ಹಿಂಪಡೆದಿದೆ.
ಸಂಧಾನ ಸಭೆಗಳ ಮೂಲಕ ಪರಿಹಾರ ಕಂಡುಕೊಳ್ಳುವಂತೆ ವಿಚಾರಣೆ ವೇಳೆ ನ್ಯಾಯಪೀಠವು ನೌಕರರ ಸಂಘಕ್ಕೆ ಸೂಚಿಸಿದೆ.
ಕೋರ್ಡ್ ನಿರ್ದೇಶನಕ್ಕೆ ತಲೆಬಾಗಿರುವ ನೌಕರರು ಮುಷ್ಕರ ಕೈಬಿಟ್ಟು ನಾಳೆ ಎಂದಿನಂತೆ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ.
ಇದಕ್ಕೂ ಮುನ್ನ ಬೇಡಿಕೆಗಳ ಪಟ್ಟಿ ಇರುವ ಪತ್ರಕ್ಕೆ ಬಿಎಂಆರ್ ಸಿಎಲ್ ಸರಿಯಾಗಿ ಸ್ಪಂದಿಸಿಅದೆ ಇದ್ದ ಕಾರಣ ನೌಕರರ ಸಂಘಟನೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ತೆಗೆದುಕೊಂಡಿತ್ತು.