ರಾಜ್ಯ

ಜಲಪಾತೋತ್ಸವಕ್ಕೆ ಸಿದ್ಧವಾಗುತ್ತಿವೆ ಚುಂಚನಕಟ್ಟೆ, ಭರಚುಕ್ಕಿ ಮತ್ತು ಗಗನಚುಕ್ಕಿ!

Shilpa D
ಮೈಸೂರು: ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದು ಜಲಾಶಯಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಲಪಾತೋತ್ಸಕ್ಕೆ ಸಿದ್ಧತೆ ನಡೆಸಿದೆ.
ಚುಂಚನಕಟ್ಟೆ,ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಳೆದ ಒಂದು ತಿಂಗಳಿಂದ ಸಾವಿರರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ, ಹೀಗಾಗಿ ಆಗಸ್ಟ್ ತಿಂಗಳ ಅಂತ್ಯದಲ್ಲಿ ಜಲಪಾತೋತ್ಸವ ನಡೆಸಲು ತಯಾರಿ ನಡೆದಿದೆ.
ಮೈಸೂರು,ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳು ಜಲಪಾತೋತ್ಸವದಿಂದಾಗಿ ಪ್ರಮುಖ ಪ್ರವಾಸಿ ಸ್ಥಳಗಳಾಗಿದ್ದು, ಎಲ್ಲಾ ತಯಾರಿ ಅದ್ಧೂರಿಯಿಂದ ನಡೆಯುತ್ತಿದೆ. ಮಳೆಯಿಲ್ಲದ ಕಾರಣ ಕಳೆದ ಕೆಲವು ವರ್ಷಗಳಿಂದ ಜಲಪಾತೋತ್ಸವವನ್ನು ಸರ್ಕಾರ ನಡೆಸಿರಲಿಲ್ಲ.
ಆಗಸ್ಟ್11 ಮತ್ತು 12 ರಂದು ಕೆ.ಆರ್ ನಗರದಲ್ಲಿರುವ ಚುಂಚನಕಟ್ಟೆ ಫಾಲ್ಸ್ ನಲ್ಲಿ ಜಲಪಾತೋತ್ಸವ ನಡೆಯಲಿದೆ,  ಸ್ಥಳೀಯ ಜಾನಪಕ ಕಲಾವಿದರು ಹಾಗಬ ಸಿನಿಮಾ ಕಲಾವಿದರು ಪ್ರೇಕ್ಷಕರ ಮನರಂಜಿಸಲಿದ್ದಾರೆ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರ ತವರು ಕ್ಷೇತ್ರವಾದ ಕೆ.ಆರ್ ನಗರದಲ್ಲಿ ಇದಕ್ಕಾಗಿ ಎಲ್ಲ ವ್ಯವಸ್ಥೆ ನಡೆಯುತ್ತಿದೆ. 
ಜಲಪಾತೋತ್ಸವಕ್ಕಾಗಿ ಸರ್ಕಾರ 50 ಲಕ್ಷ ರು ಬಿಡುಗಡೆ ಮಾಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ ಹೇಳಿದ್ದಾರೆ, ದಸರಾ  ಮುನ್ನ ಇದೊಂದು ಅತಿ ದೊಡ್ಡ ಕಾರ್ಯಕ್ರಮವಾಗಲಿದೆ ಎಂದು ಹೇಳಿದ್ದಾರೆ. 
SCROLL FOR NEXT