ರಾಜ್ಯ

ಮಹದಾಯಿ ನ್ಯಾಯಾಧಿಕರಣ ಅಂತಿಮ ತೀರ್ಪು : ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

Nagaraja AB

ಹುಬ್ಬಳ್ಳಿ : ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ  ಮಹದಾಯಿ ನ್ಯಾಯಾಧಿಕರಣ ಇಂದು ನೀಡಿದ ಅಂತಿಮ ತೀರ್ಪಿಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕುಡಿಯುವ ನೀರು ಹಂಚಿಕೆಯಲ್ಲಿ ಸ್ವಲ್ಪ ಮಟ್ಟದ ಸಮಾಧಾನವಾಗಿದ್ದರೂ ಕೃಷಿ ಉದ್ದೇಶದಿಂದ ನೀರು ಹಂಚಿಕೆ ಮಾಡದಿರುವುದರಿಂದ ಈ ಭಾಗದಲ್ಲಿನ   ಹಲವು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ನೀರು ಹಂಚಿಕೆಯ  ಒಳಸಂಚಿನ ಮಾಹಿತಿ ಅರಿಯದ ರೈತರು ಹುಬ್ಬಳ್ಳಿ- ಧಾರವಾಡ , ನವಲಗುಂದ ಮತ್ತು ನರಗುಂದದಲ್ಲಿ ಪ್ರಮುಖ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು  ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ,  ಪರಸ್ಪರ ಸಿಹಿ ಹಂಚಿ ಗೆಲುವು ಸಾಧಿಸಿರುವುದಾಗಿ ಬೀಗತೊಡಗಿದರು. ಆದಾಗ್ಯೂ, ಅಂತಿಮ ತೀರ್ಪಿನ ಬಗ್ಗೆ ರೈತರು ತೃಪ್ತಿಗೊಂಡಿಲ್ಲ.

ಕುಡಿಯುವ ಉದ್ದೇಶಕ್ಕಾಗಿ 7.5 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕರ್ನಾಟಕ, ನ್ಯಾಯಮಂಡಳಿಗೆ ಮನವಿ ಮಾಡಿತ್ತು ಆದರೆ, ನ್ಯಾಯಾಧೀಕರಣ ಕುಡಿಯುವ ನೀರು ಹಾಗೂ ವಿದ್ಯುತ್ಗಾಗಿ  5.5 ಟಿಎಂಸಿ ನೀರನ್ನು ಮಾತ್ರ ನೀಡಿದೆ.  ರೇಣುಕಾ ಸಾಗರ ಜಲಾಶಯದಿಂದ ಮಲ್ಲಪ್ರಭಾ ಭಾಗದ ರೈತರು ಸಮಾಧಾನಕಾರ ನೀರು ಪಡೆದುಕೊಂಡಿಲ್ಲ.

ಇದರಿಂದ ಅತೃಪ್ತಗೊಂಡ ರೈತರು ಕೃಷಿಗಾಗಿ ನೀರು ಪಡೆಯಲು ಸುಪ್ರೀಂಕೋರ್ಟ್ ಗೆ   ರಾಜ್ಯಸರ್ಕಾರ ಅರ್ಜಿ ಸಲ್ಲಿಸಬೇಕೆಂದು  ರೈತರು ಒತ್ತಾಯಿಸಿದ್ದಾರೆ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಹದಾಯಿ ಹೋರಾಟಗಾರ ಲೋಕನಾಥ್  ಹೆಬಸೂರ್ , ಕೃಷಿ ಉದ್ದೇಶಕ್ಕಾಗಿ ನೀರು ಪಡೆಯಲು ರಾಜ್ಯಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಬೇಕೆಂದು   ಒತ್ತಾಯಿಸಿದರು.

 ಈ ಮಧ್ಯೆ ಗೋವಾದಲ್ಲಿ ನಾಳೆಯಿಂದ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಇದ್ದು, ಮುಂದೆ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಈ ವಾರದಲ್ಲಿ ಚರ್ಚೆ ನಡೆಸುವುದಾಗಿ   ಮಹದಾಯಿ ಬಚಾವೋ ಆಂದೋಲನ ಸಂಘಟನೆ  ಕಾರ್ಯಕರ್ತರು  ತಿಳಿಸಿದ್ದಾರೆ.

SCROLL FOR NEXT