ಬೆಂಗಳೂರು: ಏರೋ ಇಂಡಿಯಾ ಸ್ಥಳಾಂತರ ಖಂಡಿಸಿ ಸಹಿ ಸಂಗ್ರಹ
ಬೆಂಗಳೂರು: ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಉತ್ತರಪ್ರದೇಶ ರಾಜ್ಯದ ಲಖನೌಗೆ ಸ್ಥಳಾಂತರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಎನ್ಎಸ್'ಯುಐ ಸಂಘಟನೆ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.
ನಿನ್ನೆ ನಗರದ ಕೇಂದ್ರ ಭಾಗದಲ್ಲಿರುವ ಕಲಾ ಕಾಲೇಜು, ಮಹಾರಾಣಿ ಕಾಲೇಜು ಮತ್ತು ಮೌಂಟ್ ಕಾರ್ಮೆಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಎನ್ಎಸ್'ಯುಐ ಸಹಿ ಸಂಗ್ರಹಿಸಿದೆ.
ರಾಜ್ಯದ ಸಂಸದರು ಹಾಗೂ ರಕ್ಷಣಾ ಸಚಿವರು ಆಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಈ ಸಂಗ್ರಹ ಕಳುಹಿಸಲು ಸಂಘಟನೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕಳೆದ ಐದು ವರ್ಷಗಳಿಂಗ ಏರೋ ಇಂಡಿಯಾ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ. ಕಾರ್ಯಕ್ರಮವನ್ನು ಸ್ಥಳಾಂತರ ಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿ ಗಗನಾ ಹೇಳಿದ್ದಾರೆ.
ಈ ವರೆಗೂ 5,000 ಸಹಿ ಸಂಗ್ರಹ ಮಾಡಲಾಗಿದೆ. ಈ ಅಭಿಯಾನ ಕೇವಲ ಆರಂಭಿಕವಷ್ಟೇ. ಸಹಿ ಸಂಗ್ರಹದ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಸಂದೇಶವನ್ನು ರವಾನಿಸುತ್ತಿದ್ದೇವೆಂದು ಎನ್ಎಸ್'ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಣೇಶ್ ಹೇಳಿದ್ದಾರೆ.
ಏರೋ ಇಂಡಿಯಾ ಸ್ಥಳಾಂತರ ಕುರಿತಂತೆ ರಾಜ್ಯದ ಹಲವೆಡೆ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗಳನ್ನೂ ಕೂಡ ನಡೆಸುತ್ತಿದ್ದಾರೆ. ಏರೋ ಇಂಡಿಯಾ ಸ್ಥಳಾಂತರವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಈ ನಡುವೆ ಎನ್ಎಸ್'ಯುಐ ಸದಸ್ಯರು ರಾಸ್ತ (ರಸ್ತೆ) ರೋಕೋ ಪ್ರತಿಭಟನೆಯನ್ನೂ ಕೂಡ ಮಂಗಳವಾರ ಹಮ್ಮಿಕೊಂಡಿದೆ. ಎಸ್ಟೀಮ್ ಮಾಲ್ ಬಳಿಯಿರುವ ರಸ್ತೆಯನ್ನು ಇಂದು ಬೆಳಿಗ್ಗೆ 10.30ರ ಸುಮಾರಿಗೆ ತಡೆಯಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹೋಗುವ ಜನರಿಗೆ ನಾವು ಸಮಸ್ಯೆಗಳನ್ನು ನೀಡುವುದಿಲ್ಲ. ನಗರಕ್ಕೆ ಸಂಪರ್ಕವಿರುವ ರಸ್ತೆಗಳನ್ನು ಮಾತ್ರ ತಡೆಯಲು ನಿರ್ಧರಿಸಲಾಗಿದೆ ಎಂದು ಎನ್ಎಸ್'ಯುಐ ಬೆಂಗಳೂರು ಅಧ್ಯಕ್ಷ ಜಯೇಂದರ್ ಶಹಿ ರಜಪೂತ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos