ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ 
ರಾಜ್ಯ

ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ

ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರ ಅಧಿಕೃತ ನಿವಾಸ ಬೆಂಗಳೂರಿನ ರಾಜಭವನ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಅವಕಾಶವನ್ನು ಕಲ್ಪಿಸಲಾಗಿದೆ...

ಬೆಂಗಳೂರು: ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರ ಅಧಿಕೃತ ನಿವಾಸ ಬೆಂಗಳೂರಿನ ರಾಜಭವನ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. 
ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಶತಮಾನಕ್ಕೂ ಹಳೆಯದಾದ ಹಾಗೂ ವಿಶಿಷ್ಟ ವಾಸ್ತು ವಿನ್ಯಾಸವನ್ನು ಹೊಂದಿರುವ ಪುರಾತನ ಕಟ್ಟಡವಾದ ರಾಜಭವನದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಕುತೂಹಲಗಳಿದ್ದು, ಈ ಕುತೂಹಲವನ್ನು ತಣಿಸುವ ಸಲುವಾಗಿ ಆ.16ರಿಂದ 31ರವರೆಗೂ ಸಾರ್ವಜನಿಕರು ರಾಜಭವನ ವೀಕ್ಷಣೆ ಮಾಡಲು ಮುಕ್ತ ಅವಕಾಶವನ್ನು ಮಾಡಿಕೊಡಲಾಗಿದೆ. 
ಪುರಾತನ ಕಟ್ಟಡ ವೀಕ್ಷಿಸಲು ಆಗಸ್ಟ್ 31ರವರೆಗೂ ಸಂಜೆ 4.30ರಿಂದ 7 ಗಂಟೆಯವರೆಗೆ ಯಾರೂ ಬೇಕಾದರೂ ಭೇಟಿ ನೀಡಿ ವೀಕ್ಷಣೆ ಮಾಡಬಹುದು. ಭೇಟಿ ನೀಡಲು ಇಚ್ಛಿಸುವವರು ಮೊದಲಿಗೆ ಆನ್'ಲೈನ್ ನಲ್ಲಿ ಬುಕ್ ಮಾಡಿಕೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ. 
ರಾಜಭವನದ ವೆಬ್'ಸೈಟ್ ಮೂಲಕ ಆನ್'ಲೈನ್ ನಲ್ಲಿ ನೋಂದಣಿಯಾದ ಸಾರ್ವಜನಿಕರಿಗೆ ಇ-ಮೇಲ್ ಮತ್ತು ಎಸ್ಎಂಎಶ್ ಮೂಲಕ ರಾಜಭವನದ ಅಧಿಕಾರಿಗಳು ದೃಢೀಕರಣ ಪತ್ರ ನೀಡುತ್ತಾರೆ. ನಿಗದಿಂತ ದಿನದಂದು ರಾಜಭವನಕ್ಕೆ ಪ್ರವೇಶ ಪಡೆಯಬಹುದಾಗಿದೆ. 
ಸುಮಾರು 20 ನಿಮಿಷಗಳ ಕಾಲ ರಾಜಭವನ ಅಂಗಳದಲ್ಲಿ ಸುತ್ತಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ರಾಜಭವನದ ಬಗ್ಗೆ ಮಾಹಿತಿ ನೀಡಲು ಹಲವು ಭಾಷೆಗಳಲ್ಲೂ ಪರಿಣಿತರಾದ ಪ್ರವಾಸೋದ್ಯಮ ಇಲಾಖೆಯ 10 ಗೈಡ್ ಗಳನ್ನು ನೇಮಕ ಮಾಡಲಾಗಿದೆ. 
ರಾಜಭವನ ಅತ್ಯಂತ ಹಳೆಯ ಕಟ್ಟಡವಾಗಿದೆ. ರಾಜಭವನ ವೀಕ್ಷಿಸಲು ಜನರು ಕುತೂಹಲಭರಿತರಾಗಿದ್ದಾರೆ. ಹೀಗಾಗಿ ಸಾರ್ವಜನಿಕರಿಗೂ ಕೂಡ ರಾಜಭವನ ವೀಕ್ಷಿಸುವ ಅವಕಾಶವನ್ನು ನೀಡಲಾಗಿದ್ದು, ಇದು ನಮ್ಮ ಮೊದಲನೇ ಪ್ರಯತ್ನವಾಗಿದೆ. ಆಗಸ್ಟ್ 31 ರವರೆಗೂ ಸಂಜೆ 4 ಗಂಟೆಯಿಂದ 7ರವಸೆಗೆ ಯಾರು ಬೇಕಾದರೂ ರಾಜಭವನಕ್ಕೆ ಭೇಟಿ ನೀಡಬಹುದು. ರಾಜಭವನ ವೀಕ್ಷಣೆಗೆ ಬರುವ ಜನರಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಹೇಳಿದ್ದಾರೆ. 
ರಾಜಭವನವನ್ನು ಬ್ರಿಟೀಷರ ಕಾಲದಲ್ಲಿ ದಿ ರೆಸಿಡೆನ್ಸಿ ಎಂದು ಗುರ್ತಿಸಲಾಗುತ್ತಿತ್ತು. ಮೈಸೂರು ಮಹಾರಾಜರ ಕಾಲದಲ್ಲಿ ಅಂದರೆ ಮೈಸೂರು ಪ್ರಾಂತ್ಯದ ಬ್ರಿಟೀಷ್ ಸಂಸ್ಥೆಯ ನಿವಾಸವಾಗಿತ್ತು.
ನಗರದ ಅತ್ಯಂತ ಎತ್ತರದ ಜಾಗ ಎಂದು ಗುರ್ತಿಸಿಕೊಂಡಿರುವ ಹೈಗ್ರೌಂಡ್ ನಲ್ಲಿರುವ ಈ ವಿಶಾಲ ಕಟ್ಟಡವು 1840 ಮತ್ತು 1842ರ ಅವಧಿಯಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಮಾರ್ಕ್ ಕಬ್ಬನ್ 1861ರಲ್ಲಿ ಇಂಗ್ಲೆಂಡ್'ಗೆ ಮರಳಿದ ಬಳಿಕ ಈ ಬಂಗಲೆಯನ್ನು ಮಾರಾಟಕ್ಕಿಡಲಾಗಿತ್ತು. ಮಾರ್ಕ್ ಕಬ್ಬನ್ ಉತ್ತರಾಧಿಕಾರಿಯಾಗಿ ಬಂದ ಲೆವಿನ್ ಬೆಂಥಮ್ ಬೌರಿಂಗ್ ಸರ್ಕಾರದ ಅನುದಾನದಿಂದ ಖರೀದಿಸಿದರು. ಅಂದಿನಿಂದ ಕಮೀಷನರ್ ಅಧಿಕೃತ ನಿವಾಸವಾಗಿತ್ತು. 
1881ರಲ್ಲಿ ಪ್ರಾಂತೀಯ ಅಧಿಕಾರವನ್ನು ಮೈಸೂರು ರಾಜ ಮನೆತನಕ್ಕೆ ಮರಳಿದ ಬಳಿಕ ಈ ಭವನವು ಬ್ರಿಟೀಷ್ ರೆಸೆಡೆನ್ಸಿ ನಿವಾಸವಾಯಿತು. ಆ.15 1947ರ ಸ್ವಾತಂತ್ರ್ಯದವರೆಗೆ ಇದನ್ನು ಬ್ರಿಟೀಷ್ ರೆಸಿಡೆನ್ಸಿ ಎಂದೇ ಕರೆಯಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ರೆಸಿಡೆನ್ಸಿಯನ್ನು ರದ್ದುಗೊಳಿಸಿ ರಾಜ್ಯಪಾಲಕ ಕಾರ್ಯಲಯ ಆರಂಭಿಸಲಾಗಿತ್ತು. 
ವಾಜಪೇಯಿ ನಿಧನ ಹಿನ್ನಲೆಯಲ್ಲಿ ಸಾರ್ವಜನಿಕ ವೀಕ್ಷಣೆ ಮುಂದೂಡಿಕೆ
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿರುವ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪ್ತಿ ಒಂದು ವಾರಗಳ ಕಾಲ ಶೋಕಾಚರಣೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರ ರಾಜಭವನ ವೀಕ್ಷಣೆಯನ್ನು 7 ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ರಾಜಭವನ ಮೂಲಗಳು ಮಾಹಿತಿ ನೀಡಿವೆ. 
ದಿನಾಂಕ 16-8-2018 ರಿಂದ 22-08-2018ರವರೆಗೆ ರಾಜಭವನದ ವೀಕ್ಷಣೆಗೆ ಪ್ರವೇಶಕ್ಕೆ ನೊಂದಾಯಿಸಿದ್ದ ಸಾರ್ವಜನಿಕರಿಗೆ ದಿನಾಂಕ 1-9-2018ರಿಂದ 6-9-2018ರವರೆಗೆ ರಾಜಭವನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಮಿಸ್ ಆಯ್ತು ಸಚಿವ ಸ್ಥಾನ; ‘ಶಕ್ತಿ ಪ್ರದರ್ಶನ’ಕ್ಕೆ ಸಜ್ಜಾದ ಸಿದ್ದರಾಮಯ್ಯ ಆಪ್ತರು! ಮೈಸೂರಿನಲ್ಲಿ ‘ಅಸಮಾಧಾನ’ ಸಭೆ!

'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump

ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿನಿ ದೂರಿನ ಮೇರೆಗೆ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನ: ವಿಚಾರಣೆ ಮುಂದೂಡಿದ ಕಲ್ಕತ್ತಾ ಹೈಕೋರ್ಟ್!