ಪ್ರವಾಹದ ಬಳಿಕ ಮನೆಗೆ ಬಂದು ಪರಿಶೀಲನೆ ನಡೆಸುತ್ತಿರುವ ಮಹಿಳೆ
ಮಂಗಳೂರು: ಜಲ ಪ್ರಳಯಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಜೋಡುಪಾಲದಲ್ಲಿ 200 ಜನರನ್ನು ಶುಕ್ರವಾರ ರಕ್ಷಣೆ ಮಾಡಿದೆ.
30 ಎನ್'ಡಿಆರ್'ಎಫ್ ಪಡೆಗಳು ಸುಳ್ಯದಲ್ಲಿ ಬೀಡುಬಿಟ್ಟಿದ್ದು, ಸಂಕಷ್ಟದಲ್ಲಿರುವ ಜನರನ್ನು ರಕ್ಷಣೆ ಮಾಡುವತ್ತ ಕಾರ್ಯನಿರ್ವಹಿಸುತ್ತಿವೆ.
ಗುಡ್ಡಗಳು ಕುಸಿದು ಬೀಳುತ್ತಿರುವ ಪರಿಣಾಮ ಸಂಪಾಜೆಯಲ್ಲಿರುವ ಸೇವೆ ಕುಸಿದು ಬಿದ್ದಿದ್ದು, ಜೋಡುಪಾಲ ಗ್ರಾಮ ಶುಕ್ರವಾರ ಸಂಜೆಯಿಂದ ಸಂಪರ್ಕವನ್ನು ಕಳೆದುಕೊಕಂಡಿದೆ. ಗುಡ್ಡಗಳು ಕುಸಿದು ಬೀಳುತ್ತಿರುವ ಪರಿಣಾಮ ರಕ್ಷಣಾ ಕಾರ್ಯಚರಣೆಗೆ ಭಾರೀ ಸಮಸ್ಯೆಗಳು ಎದುರಾಗುತ್ತಿದ್ದು, ಭದ್ರತಾ ಪಡೆಗಳು ಬೋಟ್ ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಟೆಕ್ಕಿಲಾ ಮತ್ತು ಸಂಪಾಜೆಯಲ್ಲಿ ನಿರಾಶ್ರಿತ ಶಿಬಿರಗಳನ್ನು ರಚನೆ ಮಾಡಲಾಗಿದ್ದು, ಸಂತ್ರಸ್ತರ ಜನರನ್ನು ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಜೋಡುಪಾಲ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಭದ್ರತಾ ಪಡೆಗಳಿಗೆ ಮಧ್ಯ ವಯಸ್ಸಿನ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದೆ. ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮೂವರು ಜನರು ಸಾವನ್ನಪ್ಪಿದ್ದಾರೆ.
ಭಾರೀ ಮಳೆಯಾಗುತ್ತಿರುವ ಪರಿಣಾಮ ಪುತ್ತೂರು ತಾಲೂಕಿನ ಕೊಲ್ಲಮಜಿಲ್ ಪಂಚಾಯತ್ ಬಳಿಯಿರುವ ಪ್ರಮುಖ ರಸ್ತೆ ಬಂದ್ ಆಗಿದೆ. ಇದರ ಪರಿಣಾಮ ಕೊಡಿಪಡಿ-ಕಬಕ ರಸ್ತೆಗಳು ಸಂಚಾರ ದಟ್ಟಣೆ ಸಮಸ್ಯೆಗಳನ್ನು ಎದುರಿಸುತ್ತಿವೆ.
ಉಲ್ಲಾಳದಲ್ಲಿ ತೆಂಗಿನ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಲ್ಲಪ್ಪುವಿನಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಕುಮಾರಧಾರ ನದಿಯಲ್ಲಿ ತುಂಬಿ ಹರಿದ ಪರಿಣಾಮ ಕುಲ್ಕುಂಡ ಎಸ್'ಟಿ ಕಾಲೋನಿಯಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ನದಿ ತುಂಬಿ ಹರಿದ ಪರಿಣಾಮ ಕುಲ್ಕುಂಡ ಎಸ್'ಟಿ ಕಾಲೋನಿಯ ಬಳ್ಳಿ ಮತ್ತು ಚಂದ್ರಾಸ್ ನಲ್ಲಿದ್ದ ಮನೆಗಳಿಂದ ಜನರು ಹೊರಗೆ ಬಂದಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿವೆ, 115 ರಿಂದ 160 ಎಂಎಂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿಗಳು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ವಾಹನ ಸಂಚಾರಕ್ಕೆ ಚಾರ್ಮಡಿ ಘಾಟ್ ರಸ್ತೆಗಳನ್ನು ಮುಕ್ತಗೊಳಿಸಲಾಗಿದೆ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಧಿಲ್ ಹೇಳಿದ್ದಾರೆ.
ಚಾರ್ಮಡಿ ಘಾಟ್ ಬಳಿ ಭಾರೀ ವಾಹನಗಳಿಗೆ ನಿಷೇಧ
ಭಾರೀ ಮಳೆ ಹಿನ್ನಲೆಯಲ್ಲಿ ಚಾರ್ಮಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿದೆ. ಟ್ಯಾಂಕರ್ ಗಳು, ಟ್ರಕ್ ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics