ಬೆಂಗಳೂರು: ಮಕ್ಕಳ ಕಳ್ಳ ಎಂದು ಶಂಕಿಸಿ ಯುವಕನೊಬ್ಬನನ್ನು ಸ್ಥಳೀಯರು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಣ್ಣೂರು ಸಮೀಪದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, 18 ವರ್ಷದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಯುವಕನಿಗೆ ಹೆಣ್ಣೂರು ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಉತ್ತರ ಪ್ರದೇಶದ ಯುವಕ ಅಣ್ಣನೊಂದಿಗೆ ಎರಡು ವರ್ಷದ ಹಿಂದೆ ನಗರಕ್ಕೆ ಬಂದಿದ್ದ. ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಬಾರ್ ಗೆ ಹೋಗಿದ್ದ ಯುವಕ ಮದ್ಯದ ಅಮಲಿನಲ್ಲೇ ಮನೆಯತ್ತ ಹೊರಟಿದ್ದ ಅದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನೊಬ್ಬನನ್ನು ಮಾತನಾಡಿಸಲು ಯತ್ನಿಸಿ ಎಳೆದಾಡಿದ್ದ. ಅದನ್ನು ಗಮನಿಸಿದ್ದ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ಸ್ಥಳೀಯರು ಕರೆ ಮಾಡಿದ ಹಿನ್ನೆಲೆಯಲ್ಲಿ ಹೊಯ್ಸಳ ವಾಹನದ ಗಸ್ತು ಸಿಬ್ಬಂದಿ ಯುವನಕನ್ನು ರಕ್ಷಿಸಿದ್ದಾರೆ.
ಹಲ್ಲೆ ಬಗ್ಗೆ ಯುವನಕ ಅಣ್ಣನಿಗೆ ತಿಳಿಸಲಾಗಿತ್ತು, ಠಾಣೆಗೆ ಬಂದ ಅವರು ಯುವಕನಿಗೆ ದೂರು ನೀಡದಂತೆ ಆತ ತಿಳಿಸಿದ್ದಾರೆ ಹೀಗಾಗಿ ದೂರು ನೀಡಲಿಲ್ಲ.