ಸಂಗ್ರಹ ಚಿತ್ರ 
ರಾಜ್ಯ

ನಿಖಿಲ್ ಗೆ ಕೂಡಿಬಂದ ಕಂಕಣ?; ಎಚ್ ಡಿಕೆ ದಂಪತಿ ವಿಜಯವಾಡಕ್ಕೆ ತೆರಳಿದ್ದೇಕೆ?

ದೊಡ್ಡ ಗೌಡರ ಕುಟುಂಬದ ಮತ್ತೊಂದು ಕುಡಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರು: ದೊಡ್ಡ ಗೌಡರ ಕುಟುಂಬದ ಮತ್ತೊಂದು ಕುಡಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಹೌದು.. ನಟ ನಿಖಿಲ್ ಗೌಡ ಅವರ ವಿವಾಹಕ್ಕೆ ಕಂಕಣ ಕೂಡಿಬಂದಿದ್ದು, ಇದೇ ಡಿಸೆಂಬರ್ ನಲ್ಲಿ ಅವರ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ನಿಖಿಲ್ ಗೌಡ ಅವರ ತಂದೆ ಸಿಎಂ ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿ ಅನಿತಾ ಅವರು ಇಂದು ದಿಢೀರ್ ವಿಜಯವಾಡಕ್ಕೆ ತೆರಳಿದ್ದರು. ಅಲ್ಲಿ ಇಂದ್ರಕೀಲಾದ್ರಿಯ ಕನಕದುರ್ಗ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ವಿಜಯವಾಡ ಮೂಲದ ಉದ್ಯಮಿ ಸ್ನೇಹಿತ ಪ್ರಾಫಿಟ್ ಶೂ ಕಂಪೆನಿ ಮುಖ್ಯಸ್ಥ ಬೋಡೆಪೂಡಿ ಕೋಟೇಶ್ವರ ರಾವ್ ಅವರ ಮನೆಗೆ ತೆರಳಿದ ಎಚ್ ಡಿಕೆ ದಂಪತಿ ಅಲ್ಲಿ ಭೋಜನ ಸವಿದರು.
ಇದೇ ಕಾರಣಕ್ಕೆ ಕೋಟೇಶ್ವರ ರಾವ್ ಅವರ ಪುತ್ರಿಯೊಂದಿಗೆ ನಿಖಿಲ್ ಗೌಡ ವಿವಾಹ ನೆರವೇರಲಿದೆ ಎಂದು ಊಹಾಪೋಹಗಳು ಹುಟ್ಟಿತ್ತು, ಈ ಬಗ್ಗೆ ಖುದ್ಧು ಕೋಟೇಶ್ವರರಾವ್ ಅವರು ಸ್ಪಷ್ಟನೆ ನೀಡಿದ್ದು, ಊಹಾಪೋಹಗಳೆಲ್ಲಾ ಶುದ್ಧ ಸುಳ್ಳು. ನನ್ನ ಮಗಳೊಂದಿಗೆ ನಿಖಿಲ್ ಗೌಡ ವಿವಾಹ ನಿಶ್ಚಿಯವಾಗಿಲ್ಲ. ಕುಮಾರಸ್ವಾಮಿ ಅವರು ನಮ್ಮ ಕುಟುಂಬದ ಸ್ನೇಹಿತರು. ಹೀಗಾಗಿ ಊರಿಗೆ ಬಂದಿದ್ದ ಅವರನ್ನು ಮನೆಗೆ ಆಹ್ವಾನಿಸಿದೆ. ಬೋಜನ ಸೇವಿಸಿ ಅವರು ಕರ್ನಾಟಕಕ್ಕೆ ವಾಪಸ್ ಆದರು. ಇದು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರಿಗೆ ನಿಖಿಲ್ ಮದುವೆ ಪ್ರಶ್ನೆ ಎದುರಾಯಿತು. ಇದಕ್ಕೆ ಹಾಸ್ಯ ಮಿಶ್ರಿತ ಧಾಟಿಯಲ್ಲಿ, ಹುಡುಗಿ ಒಪ್ಪಿದರೆ ಮದುವೆ ಮಾಡಿಸೋಣ ಎಂದು ಹೇಳಿರುವುದು ನಿಶ್ಚಿತಾರ್ಥ ಸುದ್ದಿ ಇನ್ನೊಂದಿಷ್ಟು ಮಹತ್ವ ಪಡೆದುಕೊಂಡಿತ್ತು.
ಇನ್ನು ಮೂರು ವರ್ಷಗಳ ಹಿಂದೆ, ಅಂದ್ರೆ 2015 ರಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಿತ್ರ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಪುತ್ರಿ ಸ್ವಾತಿಯೊಂದಿಗೆ ನಿಖಿಲ್ ಕುಮಾರ್ ಎಂಗೇಜ್ ಮೆಂಟ್ ಆಗಿತ್ತು. ಬಳಿಕ ಎಂಗೇಜ್ ಮೆಂಟ್ ಮುರಿದುಬಿದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!