ಪ್ರಕಾಶ್ ರೈ 
ರಾಜ್ಯ

ಪ್ರಕಾಶ್ ರೈ ಮೂರು ಗುರುತಿನ ಚೀಟಿ ಹೊಂದಿದ್ದಾರೆ! ಆರೋಪಕ್ಕೆ ರೈ ಹೇಳಿದ್ದೇನು?

ಕನ್ನಡಿಗನಾದ ಪ್ರಕಾಶ್ ರೈ ಅವರು ಮೂರು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತಮಿಳುನಾಡು ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಕಾರ್ಡ್...

ಬೆಂಗಳೂರು: ಕನ್ನಡಿಗನಾದ ಪ್ರಕಾಶ್ ರೈ ಅವರು ಮೂರು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತಮಿಳುನಾಡು ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿರುವ ಅವರಿಗೆ ಕರ್ನಾಟಕದಲ್ಲೇ ಗುರುತಿನ ಚೀಟಿ ಇಲ್ಲ ಎಂಬುದು ವಿಶೇಷ. 
ಇನ್ನು ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಆರೋಪದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಇಂತಹ ಆರೋಪ ಮಾಡಲಾಗಿದೆ. ಇನ್ನು ಅವರು ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿರಬೇಕು. ಒಂದು ವೇಳೆ ಅವರ ಬಳಿ ಆಧಾರಗಳಿದ್ದರೆ ರುಜುವಾತು ಮಾಡಲಿ. ನಾನು ಕೂಡ ನನ್ನ ಬಳಿ ಒಂದೇ ವೋಟರ್ ಐಡಿ ಇರುವುದನ್ನು ಸಾಬೀತು ಮಾಡುತ್ತೇನೆ ಎಂದರು. 
ನನ್ನ ವಿರುದ್ಧ ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ, ನಾನು ಕರ್ನಾಟಕದಲ್ಲಿ ಮತದಾನ ಮಾಡುತ್ತಿಲ್ಲವೆಂದು ಅನೇಕರು ದೂರಿದ್ದಾರೆ. ತಮಿಳುನಾಡಿನ ಅಡಿಯಾರ್ ನಲ್ಲಿ ನಾನು 20 ವರ್ಷಗಳಿಂದ ವಾಸವಾಗಿದ್ದೇನೆ. ಹೀಗಾಗಿ ಅಲ್ಲಿ ಮಾತ್ರ ಮತದಾನದ ಗುರುತಿನ ಚೀಟಿ ಪಡೆದುಕೊಂಡಿರುವೆ. ಭಾರತದ ಪ್ರಜೆಯಾಗಿರುವ ನಾನು ಎಲ್ಲಿಯಾದರೂ ಮತದಾನದ ಹಕ್ಕನ್ನು ಪಡೆದುಕೊಂಡಿರುವೆ ಎಂದು ತಿಳಿಸಿದರು. 
ಬಹುಭಾಷಾ ನಟ ಪ್ರಕಾಶ್ ರೈ ಅವರು ಮೂರು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ತಮಿಳುನಾಡಿನ 2 ಕಡೆ ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ದಾಖಲೆ ಇರುವ ಮಾಹಿತಿ ಈಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು: ನೆಟ್ಟಿಗರಿಂದ ಟೀಕೆ

ಮಹಾ ಅಷ್ಟಮಿಯಂದು ಮದ್ಯದಂಗಡಿ ಮತ್ತು ಬಾರ್‌ಗಳು ಬಂದ್; ದುರ್ಗಾ ಪೂಜೆ ವೇಳೆ ಡಿಜೆ ಸಂಗೀತ ನಿಷೇಧ!

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ