ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ರೈಲಿನಿಂದ ಬಿದ್ದು ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಪುತ್ರ ನಿಧನ

ಬೆಳಗಾವಿಯ ಎಂಇಎಸ್‌ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರಾತ್ರಿ ರೈಲಿನಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ....

ಬೆಂಗಳೂರು: ಬೆಳಗಾವಿಯ ಎಂಇಎಸ್‌ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರಾತ್ರಿ ರೈಲಿನಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ.
ಸಾಗರ್‌ ಸಾಂಬಾಜಿ ಪಾಟೀಲ್‌ (38) ಅವರು ಸ್ನೇಹಿತರೊಂದಿಗೆ ಬೆಳಗಾವಿಗೆ ತೆರಳಲೆಂದು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಶ್ರೀರಾಂಪುರ ಬಳಿ ಬಂದಾಗ ಸಾಗರ್‌ ಆಯತಪ್ಪಿ  ಕೆಳ ಬಿದ್ದಿದ್ದಾರೆ. ಪರಿಣಾಮವಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ತಲೆಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಸಾಗರ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಮೇಲೆ ಬೆರಳು ತೋರಿಸೋದು ನಿಮ್ಮ ಹಳೆಯ ಚಾಳಿ, ಆರೋಪ ಮಾಡೋದು ಬಿಟ್ಟು ಆಂತರಿಕ ಭದ್ರತಾ ವೈಫಲ್ಯಗಳತ್ತ ಗಮನಹರಿಸಿ: ಪಾಕ್'ಗೆ ಭಾರತ ತಿರುಗೇಟು

ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣ: ನ್ಯಾಯಮಂಡಳಿ ಸ್ಥಾಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

'ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಮಾತ್ರ ತರಗತಿ': ರಂಜಾನ್ ವೇಳೆ ಉರ್ದು ಶಾಲೆಗಳ ಶಾಲಾ ಅವಧಿ ಬದಲಾವಣೆ, BJP ಕಿಡಿ!

ಪತಿಯ ಅಂತ್ಯಕ್ರಿಯೆ ಪೂರ್ಣಗೊಳ್ಳುವ ಮೊದಲೇ ಸುನೇತ್ರಾ ಪವಾರ್ DCM ಆಗಿ ನೇಮಕಗೊಂಡಿರುವುದರ ಹಿಂದೆ ಬಿಜೆಪಿ 'ಮಾಸ್ಟರ್ ಮೈಂಡ್' ಕೈವಾಡ!

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಕಾರ್ಣಿಕ, ರೈತರ ಸಂತಸ? Video

SCROLL FOR NEXT