ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮೆಟ್ರೋ ಮಾರ್ಗ ನಿರ್ಮಾಣಕ್ಕೆ 16 ಎಕರೆ ಭೂಮಿ ನೀಡಿದ ಕಂದಾಯ ಇಲಾಖೆ

ಎರಡನೇ ಹಂತದ ಕಾಡುಗೋಡಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸುಮಾರು 16 ಎಕರೆ ಭೂಮಿ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ...

ಬೆಂಗಳೂರು: ಎರಡನೇ ಹಂತದ ಕಾಡುಗೋಡಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸುಮಾರು 16 ಎಕರೆ ಭೂಮಿ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ,ಎಂ ವಿಜಯ್ ಭಾಸ್ಕರ್  ಕಂದಾಯ, ಬಿಡಿಎ, ಅರಣ್ಯ ಮತ್ತು ಬಿಎಂ ಆರ್ ಸಿಎಂ ಉನ್ನತ ಅಧಿಕಾರಗಳ ಜೊತೆ ಸಭೆ ನಡೆಸಿದರು. 72.1 ಕಿಮೀ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯಕ್ಕೆ ಸುಮಾರು 32 ಸಾವಿರ ಕೋಟಿ ರು ಹಣ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.ಇದಕ್ಕೆ 13,26 ಲಕ್ಷ ಚದರ ಕೀಮೀ ಭೂಮಿ ಬೇಕಾಗಿದ್ದು, ಇದರಲ್ಲಿ ಈಗಾಗಲೇ 8.6 ಲಕ್ಷ ಚದರ ಕಿಮೀ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪರಿಹಾರವಾಗಿ ಜಾಗದ ಮಾಲಿಕರಿಗೆ 6,293 ಕೋಟಿ ರು ಹಣ ನೀಡಲಾಗಿದೆ.
ಮೆಟ್ರೋ ಮಾರ್ಗ ನಿರ್ಮಾಣ ಸಂಬಂಧ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ರಕ್ಷಣಾ ಇಲಾಖೆ, ರೈಲ್ವೆ ಇಲಾಖೆಗಳ ಜೊತೆಯೂ ಭೂ ಸ್ವಾಧೀನದ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಬಿಎಂಆರ್ ಸಿಎಲ್ ಜನರಲ್ ಮ್ಯಾನೇಜರ್ ಎಂ.ಎಸ್ ಚಂಗಪ್ಪ ಗೌಡರ್ ತಿಳಿಸಿದ್ದಾರೆ.
ತಿಪ್ಪಗೊಂಡನಹಳ್ಳಿ  ಬಳಿ 20 ದಿನಗಳ ಒಳಗೆ  16 ಎಕರೆ ಜಾಗ ನೀಡಲು ಕಂದಾಯ ಇಲಾಖೆ ಸಮ್ಮತಿಸಿದೆ, ಜೊತೆಗೆ  ಅರಣ್ಯ ಇಲಾಖೆ ಕಾಡುಗೋಡಿ  ವಿಭಾಗದ ಮಾರ್ಗ ನಿರ್ಮಾಣಕ್ಕೆ ಪ್ರಸ್ತಾವಿತ 45 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳಲು ಯೋಜಿಸಿದೆ, ಬೆಯ್ಯಪ್ಪನಹಳ್ಳಿ- ವೈಟ್ ಫೀಲ್ಡ್ ಮಾರ್ಗ ತುಂಬಾ ನಿರ್ಣಾಯಕವಾಗಿದೆ, ಹೀಗಾಗಿ ಅರಣ್ಯ ಇಲಾಖೆಗೆ ಬಿಎಂಆರ್ ಸಿಎಲ್ ಪರ್ಯಾಯವಾಗಿ ದಾಂಡೇಲಿ ಹುಲಿ ರಕ್ಷಿತಾರಣ್ಯದ 29 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. 
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಾಗವಾರ-ಗೊಟ್ಟಿಗೆರೆ  ಮಾರ್ಗ ಬಹುತೇಕ ಪೂರ್ಣವಾಗಿದೆ, ಜಯನಗರದಲ್ಲಿ 5ಸಾವಿರ ಚದರ ಅಡಿ ಜಾಗ ಬಿಟ್ಟುಕೊಡಲು ಅಗ್ನಿ ಶಾಮಕ ಇಲಾಖೆ ಒಪ್ಪಿಗೆ ನೀಡಿದೆ,  ರಾಜ್ಯ ಉದ್ಯೋಗ ಮತ್ತು ತರಬೇತಿ ಇಲಾಖೆ ಕೂಡ 2ಸಾವಿರ ಚದರ ಅಡಿ ಜಾಗ ನೀಡಲು ಒಪ್ಪಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ