ತುಮಕೂರು: ತಿಪಟೂರಿನ ಬನ್ಸಾಲಿ ಡಾಬ ಬಳಿ ತಡರಾತ್ರಿ ಅಪರಿಚಿತ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಿರೀಶ್ (23), ಯೋಗಿಶ್ (25), ಪ್ರವೀಣ್ (24) ಮೃತರು. ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದ್ದು ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರು ಭದ್ರಾವತಿ ಮೂಲದವರು ಎನ್ನಲಾಗಿದೆ.
ತಿಪಟೂರಿನ ಬನ್ಸಾಲಿ ಡಾಬ ಎದುರು ಅಪರಿಚಿತ ವಾಹನ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಿಪಟೂರು ಪಿಎಸ್ಐ ಕಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.