ರಾಜ್ಯ

ಕರಿಯರ್ ಉತ್ಸವ 2018ರಲ್ಲಿ ಸಾವಿರಾರು ಜನರಿಗೆ ಸ್ಫೂರ್ತಿಯಾದ 10 ವರ್ಷದ 'ಗೂಗಲ್ ಬಾಯ್'

Manjula VN
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಆಯೋಜಿಸಿದ್ದ 'ಕರಿಯರ್ ಉತ್ಸವ 2018'ರಲ್ಲಿ ಮಾತನಾಡಿದ 10 ವರ್ಷದ ಬಾಲಕನೊಬ್ಬ ನೆರೆದಿದ್ದ ಸಾವಿನರಾರು ಜನರಿಗೆ ಸ್ಫೂರ್ತಿಯಾಗಿದ್ದಾನೆ. 
ಗೂಗಲ್ ಬಾಯ್ ಎಂದೇ ಖ್ಯಾತಿ ಪಡೆದಿರುವ ಕೌಟಿಲ್ಯ ಪಂಡಿತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು,  ಕಾರ್ಯಕ್ರಮದಲ್ಲಿ ನೆರೆದಿದ್ದ 5,000 ಜನರ ಗಮನ ಸೆಳೆದಿದ್ದಾನೆ. 
ಹರಿಯಾಣ ರಾಜ್ಯದ ಪಂಚಕುಲದಲ್ಲಿರುವ ಭುವನ್ ವಿದ್ಯಾಲಯದಲ್ಲಿ ಓದುತ್ತಿರುವ ಕೌಟಿಲ್ಯ ಪಂಡಿತ್ ಗೂಗಲ್ ಬಾಯ್ ಎಂದು ಖ್ಯಾತಿ ಪಡೆದಿದ್ದಾನೆ. ಜಾಗತಿಕ ಪ್ರಚಲಿಕ ಘಟನೆಗಳ ಬಗ್ಗೆ ಕೌಟಿಲ್ಯ ಸಂಪೂರ್ಣವಾಗಿ ತಿಳಿದುಕೊಂಡಿದ್ದಾನೆ. ಗೂಗಲ್ ಹುಡುಕುವ ಎಲ್ಲಾ ಮಾಹಿತಿಗಳು ಈ ಬಾಲಕನಿಗೆ ತಿಳಿದಿದೆ. 
213 ದೇಶಗಳ ಮಾಹಿತಿ ಮತ್ತು ಅಂಕಿ ಅಂಶಗಳು, ಮಂಗಳ ಗ್ರಹ ಸೇರಿದಂತೆ ಸೌರಮಾನದ ಸಮಗ್ರ ಮಾಹಿತಿ, ಗಣಿ ವಿಜ್ಞಾನ, ರಾಜಕೀಯ, ಭಾರತೀಯ ಇತಿಹಾಸದ ಬಗ್ಗೆಯೂ ಇವರಿಗೆ ತಿಳಿದಿದೆ. ಕೌಟಿಲ್ಯ ಐಕ್ಯೂ ಮಟ್ಟ 150ರರಷ್ಟಿದೆ. 10 ವರ್ಷದ ಈ ಬಾಲಕ ಖಗೋಳ ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂಬ ಕನಸ್ಸನ್ನು ಹೊಂದಿದ್ದಾನೆ. ಅಗಾಧ ನೆನಪಿನ ಶಕ್ತಿ ಹೊಂದಿರುವ ಕೌಟಿಲ್ಯ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾನೆ. 
ಕಾರ್ಯಕ್ರಮದಲ್ಲಿ ಮಾತನಾಡಿರುವ ಕೌಟಿಲ್ಯ, ಪ್ರತೀಯೊಬ್ಬರೂ ಬುದ್ಧಿವಂತರಾಗಿಯೇ ಇರುತ್ತಾರೆ. ಆದರೆ, ನಿಮ್ಮ ಮಿದುಳನ್ನು ಎಷ್ಟರ ಮಟ್ಟಿಗೆ, ಎಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಪರೀಕ್ಷೆಗಳನ್ನು ಬರೆಯುವಾಗ ವಿದ್ಯಾರ್ಥಿಗಳು ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಿದುಳನ್ನು ಬಳಕೆ ಮಾಡಬೇಕು. ಸಾಕಷ್ಟು ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ನಮ್ಮ ಮಿದುಳು ಹೊಂದಿದೆ. ನಮ್ಮ ಮನಃಸ್ಥಿತಿ ಹಾಗೂ ಚಿಂತನೆಗಳು ಮುಖ್ಯವಾಗುತ್ತದೆ. ಮನಸ್ಸು ಹಾಗೂ ಚಿಂತನೆಗಳು ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾನೆ.
ಇದೇ ವೇಳೆ ಈ ಪುಟ್ಟ ಬಾಲಕ ವೃತ್ತಿ ಜೀವನದ ಪ್ರಾಮುಖ್ಯತೆ, ವ್ಯಕ್ತಿತ್ವನ್ನು ಕಾಪಾಡಿಕೊಳ್ಳುವುದು, ಒಂದು ಗುಂಪಿನಲ್ಲಿ ತಮ್ಮನ್ನು ತಾವು ಹೇಗೆ ಗುರ್ತಿಸಿಕೊಳ್ಳಬೇಕೆಂಬುದರ ಬಗ್ಗೆಯೂ ಮಾತನಾಡಿ ಜನರ ಗಮನ ಸೆಳೆದಿದ್ದಾನೆ. 
SCROLL FOR NEXT