ರಾಯಚೂರು ರಸ್ತೆಗಳಲ್ಲಿ ರಾರಾಜಿಸುತ್ತಿವೆ ರೌಡಿಗಳೊಂದಿಗೆ ಬಿಜೆಪಿ ಶಾಸಕನಿರುವ ಫೋಟೋ 
ರಾಜ್ಯ

ರಾಯಚೂರು ರಸ್ತೆಗಳಲ್ಲಿ ರಾರಾಜಿಸುತ್ತಿವೆ ರೌಡಿಗಳೊಂದಿಗೆ ಬಿಜೆಪಿ ಶಾಸಕನಿರುವ ಹೋರ್ಡಿಂಗ್ ಗಳು

ಕೊಲೆ ಯತ್ನ ಹಾಗೂ ಪೊಲೀಸರಿಗೆ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳೊಂದಿಗೆ ಬಿಜೆಪಿ ಶಾಸಕರೊಬ್ಬರು ಇರುವ ಜಾಹೀರಾತು ಫಲಕಗಳು ರಾಯಚೂರಿನ ಪ್ರಧಾನ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು, ಈ ಕುರಿತು ಭಾರೀ ಟೀಕೆಗಳು ವ್ಯಕ್ತವಾಗತೊಡಗಿವೆ...

ರಾಯಚೂರು: ಕೊಲೆ ಯತ್ನ ಹಾಗೂ ಪೊಲೀಸರಿಗೆ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳೊಂದಿಗೆ ಬಿಜೆಪಿ ಶಾಸಕರೊಬ್ಬರು ಇರುವ ಜಾಹೀರಾತು ಫಲಕಗಳು ರಾಯಚೂರಿನ ಪ್ರಧಾನ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು, ಈ ಕುರಿತು ಭಾರೀ ಟೀಕೆಗಳು ವ್ಯಕ್ತವಾಗತೊಡಗಿವೆ. 
ಸನ್ನಿ ರೊನಾಲ್ಡ್ ಹಾಗೂ ಸ್ಟೀವನ್ ಬಿನ್ನಿ ಇಬ್ಬರೂ ರೌಡಿಗಳಾಗಿದ್ದು, ಸಾಕಷ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿದ್ದಾರೆ. ಇಬ್ಬರೂ ರೌಡಿಗಳು ಪ್ರಸ್ತುತ ಜಾಮೀನಿನ ಮೇರೆಗೆ ಹೊರಗಿದ್ದಾರೆ. 
ತಿಂಗಳ ಹಿಂದಷ್ಟೇ ಸನ್ನಿ ಹಾಗೂ ಬಿನ್ನಿ ಇಬ್ಬರನ್ನೂ ಪೊಲೀಸರು ಕೊಲೆ ಯತ್ನ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಪೊಲೀಸರಿಗೆ ಬೆದರಿಕೆ ಹಾಗೂ ಗ್ಯಾಂಗ್ ವಾರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನಕ್ಕೊಳಪಡಿಸಿದ್ದರು. ಇಬ್ಬರ ವಿರುದ್ಧ ಹಿಸ್ಟರಿ ಶೀಟ್ ಕೂಡ ಇದೆ.
ಕ್ರಿಸ್ಮಸ್ ಹಬ್ಬ ಹಿನ್ನಲೆಯಲ್ಲಿ ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಈ ಇಬ್ಬರು ರೌಡಿಗಳೊಂದಿಗಿರುವ ಜಾಹೀರಾತು ಫಲಕಗಳು ಇದೀಗ ರಾಯಚೂರು ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿರುವುದು, ಹಲವು ವಿರೋಧಗಳಿಗೆ ಕಾರಣವಾಗಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಪಾಟೀಲ್ ಅವರು, ನಾನು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದೇನೆ. ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇಬ್ಬರೊಂದಿಗೆ ಆತ್ಮೀಯವಾಗಿರುವುದು ನಿಜ. ಇಬ್ಬರೂ ಬಿಜೆಪಿ ಕಾರ್ಪೊರೇಟರ್ ಮಕ್ಕಳಾಗಿದ್ದಾರೆ. ಹೀಗಾಗಿ ಇಬ್ಬರೂ ನನ್ನೊಂದಿಗೆ ಆತ್ಮಿಯರಾಗಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ