ಮೈಸೂರು: ಪ್ರಸಿದ್ಧ ಸಂಗೀತ ವಿದ್ವಾಂಸರಾದ ಆರ್.ಕೆ ಪದ್ಮನಾಭ ಧಾರವಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನ ನೀಡುವ ’ಪುಟ್ಟರಾಜ ಸಮ್ಮಾನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಒಂದು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿರುವ ಈ ಪ್ರಶಸ್ತಿಯನ್ನು ಪುಟ್ಟರಾಜ ಗವಾಯಿಯವರ 105ನೇ ಜನ್ಮ ದಿನದ ಪ್ರಯುಕ್ತ ಮಾ.3ರಂದು ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ವೆಂಕಟೇಶಕುಮಾರ್ ಹೇಳಿದರು.
ಒಬ್ಬ ಸಂಗೀತಗಾರ ಹಾಗೂ ಸಮರ್ಥ ವಾಗ್ಗೇಯಕಾರರೂ ಆಗಿರುವ ಆರ್.ಕೆ. ಪದ್ಮನಾಭ ಬಹುಮುಖ ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ಪರಮಗುರು, ವಾದಿರಾಜಗುರುವರೇಣ್ಯರ ಶಿಷ್ಯರಾದ ಇವರು ಹಲವಾರು ಶಿಷ್ಯರಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆಯುತ್ತಾ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics