ಬೆಂಗಳೂರು: ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ರಾಜ್ಯದಲ್ಲಿ ಶೇ. 90ರಷ್ಟು ಮಂದಿಯಲ್ಲಿ ಹೆಚ್ ಐವಿ ಸೋಂಕು ಹರಡುತ್ತಿದೆ. ಸೋಂಕಿಗೆ ಒಳಪಟ್ಟವರಲ್ಲಿ ಹೆಚ್ಚಿನ ಮಂದಿ ಲೈಂಗಿಕ ಕಾರ್ಯಕರ್ತರು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ.
2014ರವರೆಗೂ 126 ಸ್ವಯಂಸೇವಾ ಸಂಸ್ಥೆ ಲೈಂಗಿಕ ಕಾರ್ಯಕರ್ತೆರ ಸಂಬಂಧ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇದು, 2017ರಲ್ಲಿ 76ಕ್ಕೆ ಕುಸಿದಿದೆ.
ರಾಜ್ಯ ಎಡ್ಡ್ಸ್ ನಿವಾರಣೆ ಸೊಸೈಟಿ ಪ್ರಕಾರ 86, 417 ಮಹಿಳಾ ಲೈಂಗಿಕ ಕಾರ್ಯಕರ್ತೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ.27,963 ಪುರುಷರು ಸಲಿಂಗ ಲೈಂಗಿಕ ಸಂಪರ್ಕ ಹೊಂದಿರುವವರು ಆಗಿದ್ದಾರೆ.
ರಾಷ್ಟ್ರೀಯ ಏಡ್ಡ್ಸ್ ನಿಯಂತ್ರಣ ಸಂಸ್ಥೆಯಿಂದ ನೀಡುತ್ತಿದ್ದ ಅನುದಾನವನ್ನು ಕಡಿಮೆಯಾಗಿದೆ. ಇದರಿಂದಾಗಿ ಸೇವೆಯನ್ನು ಪರಿಣಾಮಕಾರಿಯಾಗಿಕಲ್ಪಿಸುವಲ್ಲಿ ತೊಂದರೆಯಾಗಿದೆ ಎಂಬಂತಹ ಮಾತುಗಳು ಕೇಳಿಬಂದಿವೆ.
ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಉಚಿತ ಕಾಂಡೋಮ್ ವಿತರಿಸಿ,ತಪಾಸಣೆ ನಡೆಸಿಹೆಚ್ ಐವಿ ಪಾಸಿಟಿವ್ ಇದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, 10 ತಿಂಗಳಾದರೂ ಹೊರಭಾಗದ ಕಾರ್ಯಕರ್ತೆಯರಿಗೆ ವೇತನ ನೀಡಿಲ್ಲ. ಕಾಂಡೋಮ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾತಿ ಮಹಿಳಾ ಸಂಘದ ಯೋಜನಾ ನಿರ್ದೇಶಕಿ ಪುಷ್ಪಲತಾ ಆರ್, ರಾಜ್ಯ ಏಡ್ಸ್ಸ್ ನಿಯಂತ್ರಣ ಸೂಸೈಟಿಯಿಂದ 2012ರಿಂದ 52 ಲಕ್ಷ ರೂ. ವೇತನ ಬಿಡುಗಡೆಯಾಗಿಲ್ಲ, ಡಾಕ್ಟರ್ ಗೆ ನೀಡುತ್ತಿದ್ದ ವೇತನವನ್ನು 25ಸಾವಿರದಿಂದ 15 ಸಾವಿರಕ್ಕೆ ಇಳಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಹೆಚ್ ಐಎಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಏಡ್ಡ್ಸ್ ನಿಯಂತ್ರಣ ಸೂಸೈಟಿ ಜಂಟಿ ನಿರ್ದೇಶಕ ಕೆ. ಶಶಿಧರನ್, ನಿಧಿಯಲ್ಲಿ ಕಡಿತಗೊಳಿಸಿರುವುದರಿಂದ ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಚೇರಿ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಉಳಿತಾಯಗೊಳಿಸುವ ನಿಟ್ಟಿನಲ್ಲಿ ನಾಲ್ಕು ಟಿಐಗಳನ್ನು ಒಂದರಲ್ಲಿಯೇ ಸೇರಿಸಲಾಗಿದೆ. ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪೌಂಡೇಷನ್ ಸೇರಿದಂತೆ ಮತ್ತಿತರ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.