ರಾಜ್ಯ

ಎರ್ನಾಕುಲಂ ಗೆ ಹೋಗುವ ರೈಲುಗಳು ಇನ್ಮುಂದೆ ಬೈಯಪ್ಪನಹಳ್ಳಿಯಲ್ಲಿ ಹಾಲ್ಟ್!

Sumana Upadhyaya
ಬೆಂಗಳೂರು: ಬಾಣಸವಾಡಿ ರೈಲು ನಿಲ್ದಾಣವನ್ನು ಹೊರಡುವ ಮತ್ತು ತಂಗುವ ನಿಲ್ದಾಣವೆಂದು ಎರ್ನಾಕುಲಂ ಮೂಲದ ಎರಡು ರೈಲುಗಳಿಗೆ ಗೊತ್ತುಪಡಿಸುವುದಕ್ಕೆ ಭಾರೀ ವಿರೋಧ ಮತ್ತು ಪ್ರತಿಭಟನೆ ಕೇಳಿಬರುತ್ತಿದ್ದರೂ ಸಹ ಅಲ್ಲಿಂದಲೇ ನಾಳೆ ಸಂಚಾರ ಆರಂಭಿಸಲಿದೆ. ಬೆಂಗಳೂರು ರೈಲ್ವೆ ವಲಯ ರಿಯಾಯಿತಿ ನೀಡಿರುವುದರಿಂದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ರೈಲು ನಿಲುಗಡೆ ಹೊಂದಿರುತ್ತದೆ.
ಇತ್ತೀಚೆಗೆ ಕರ್ನಾಟಕ-ಕೇರಳ ಪ್ರಯಾಣಿಕರ ವೇದಿಕೆ ಮತ್ತು 87 ಮಲಯಾಳಿ ಒಕ್ಕೂಟದ ಫೆಡರೇಶನ್ ಮತ್ತು ಬೆಂಗಳೂರು ರೈಲ್ವೆ ವಲಯದ ಉನ್ನತ ಮಟ್ಟದ ಅಧಿಕಾರಿಗಳನ್ನು ಒಳಗೊಂಡು ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಧಾನಕ್ಕೆ ಬರಲಾಯಿತು. ರೈಲು ಹೊರಡುವ ಮತ್ತು ತಂಗುವ ನಿಲ್ದಾಣವೆಂದು ಬೈಯಪ್ಪನಹಳ್ಳಿಯೆಂದು ಅಥವಾ ಈಗಿರುವ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಮಾಡಬೇಕೆಂದು ಹೇಳಲಾಯಿತಾದರೂ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಎರಡು ರೈಲುಗಳ ನಿಲುಗಡೆ ಮತ್ತು ಹೊರಡುವ ನಿಲ್ದಾಣವನ್ನು ಮುಂದಿನ ದಿನಗಳಲ್ಲಿ ಬೇರೆಡೆಗೆ ವರ್ಗಾಯಿಸಲು  ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ. 
ಎರ್ನಾಕುಲಂ ರೈಲು ನಾಳೆಯಿಂದ ಬಾಣಸವಾಡಿ ರೈಲು ನಿಲ್ದಾಣದಿಂದ ಹೊರಡಲಿದೆ. ಬಾಣಸವಾಡಿ-ಎರ್ನಾಕುಲಂ ವಾರಕ್ಕೆರಡು ರೈಲು (ರೈಲು ಸಂಖ್ಯೆ 12684) ಬಾಣಸವಾಡಿಯಿಂದ ಮಂಗಳವಾರ ಮತ್ತು ಗುರುವಾರ ಸಂಜೆ 7 ಗಂಟೆಗೆ ಹೊರಡಲಿದ್ದು ಎರ್ನಾಕುಲಂಗೆ ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. 
ಎರ್ನಾಕುಲಂ-ಬಾಣಸವಾಡಿ ಬೈವೀಕ್ಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12683) ಎರ್ನಾಕುಲಂನಿಂದ ಸಂಜೆ 5 ಗಂಟೆಗೆ ಬುಧವಾರ ಹೊರಟು ಬಾಣಸವಾಡಿಯಿಂದ ಬೆಳಗ್ಗೆ 4.5ಕ್ಕೆ ತಲುಪಲಿದೆ. 
ಇನ್ನೊಂದು ರೈಲು ಎರ್ನಾಕುಲಂ-ಬಾಣಸವಾಡಿ ವಾರದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22607), ಎರ್ನಾಕುಲಂನಿಂದ ಸಾಯಂಕಾಲ 5 ಗಂಟೆಗೆ ಹೊರಟು, ಬಾಣಸವಾಡಿಗೆ ಸೋಮವಾರಗಳಂದು ಬೆಳಗ್ಗೆ 4.05ಕ್ಕೆ ತಲುಪಲಿದೆ. ಮೊದಲ ರೈಲು ಜನವರಿ 7ರಂದು ಹೊರಡಲಿದೆ. ಬಾಣಸವಾಡಿ-ಎರ್ನಾಕುಲಂ ವಾರದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22608) ಬಾಣಸವಾಡಿಯಿಂದ ಸಾಯಂಕಾಲ 7 ಗಂಟೆಗೆ ಹೊರಟು ಎರ್ನಾಕುಲಂಗೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ತಲುಪಲಿದೆ.
SCROLL FOR NEXT